Wednesday, June 3, 2026
Homeಕರಾವಳಿಉಡುಪಿಮಣಿಪಾಲದ ಕಾಲೇಜೊಂದರ ವಿದ್ಯಾರ್ಥಿ ಹಾಸ್ಟೆಲ್ ನಿಂದ ನಾಪತ್ತೆ

ಮಣಿಪಾಲದ ಕಾಲೇಜೊಂದರ ವಿದ್ಯಾರ್ಥಿ ಹಾಸ್ಟೆಲ್ ನಿಂದ ನಾಪತ್ತೆ

- Advertisement -
- Advertisement -

ಮಣಿಪಾಲದ ಕಾಲೇಜೊಂದರ ವಿದ್ಯಾರ್ಥಿ ಹಾಸ್ಟೆಲ್ ನಿಂದ ನಾಪತ್ತೆಯಾಗಿದ್ದಾನೆ. ರಾಜಸ್ಥಾನದ ‌ನಿವಾಸಿ ಜೀತ್ರೇಂದ್ರ ಕುಮಾರ್ ಅವರ ಮಗ ಸಿದ್ದಾರ್ಥ್ ಕಾರ್ವಾಲ್ ನಾಪತ್ತೆಯಾದ ವಿದ್ಯಾರ್ಥಿ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಜೀತೇಂದ್ರ ಕುಮಾರ್‌  ಅವರು ದಿನಾಂಕ 07/07/2025 ರಂದು ಬೆಳಿಗ್ಗೆ 08:00 ಗಂಟೆಗೆ ಮಣಿಪಾಲ MSAP ಹಾಸ್ಟೇಲಿನಲ್ಲಿರುವ ಮಗನನ್ನು ನೋಡಲು ಬಂದಾಗ  ಅವರ ಮಗ ಸಿದ್ದಾರ್ಥ ಕಾರ್ವಾಲ್‌ (23) ಈತನು ಹಾಸ್ಟೆಲಿನ ರೂಮಿನಲ್ಲಿ ಇಲ್ಲದೇ ರೂಮಿನಲ್ಲಿ ಬಟ್ಟೆ ಹಾಗೂ ಮೊಬೈಲ್‌ ಇದ್ದು ನಂತರ Care Taker Block 10 ಕೌಂಟರಿಗೆ ಹೋಗಿ ವಿಚಾರಿಸಿದ್ದಾರೆ. ಆಗ ಸಿದ್ಧಾರ್ಥ್  ದಿನಾಂಕ 06/07/2025 ರಂದು ರಾತ್ರಿ 10:30 ಗಂಟೆಗೆ ಹೋಗಿರುವುದಾಗಿ ತಿಳಿಸಿದ್ದಾರೆ. ಬಳಿಕ ಜೀತೇಂದ್ರ ಕುಮಾರ್  ಮಗ ಹಾಸ್ಟೇಲಿಗೆ ಬರದೇ ಮನೆಗೂ ಹೋಗದೇ ಕಾಣೆಯಾದ ಬಗ್ಗೆ  ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

- Advertisement -

Latest News

error: Content is protected !!