Friday, October 4, 2024
Homeಅಪರಾಧ11 ವರ್ಷದ ವಿದ್ಯಾರ್ಥಿಯನ್ನೇ ಶಾಲೆಯ ಏಳಿಗೆಗಾಗಿ ಬಲಿ ನೀಡಿದ ಮಾಲಕ !!!

11 ವರ್ಷದ ವಿದ್ಯಾರ್ಥಿಯನ್ನೇ ಶಾಲೆಯ ಏಳಿಗೆಗಾಗಿ ಬಲಿ ನೀಡಿದ ಮಾಲಕ !!!

spot_img
- Advertisement -
- Advertisement -

ಉತ್ತರ ಪ್ರದೇಶ:  11 ವರ್ಷದ ವಿದ್ಯಾರ್ಥಿಯೋರ್ವನನ್ನು ಇಲ್ಲಿನ ಶಾಲೆಯೊಂದರ ಮಾಲಕರು ಶಾಲೆಯ ಏಳಿಗೆಗಾಗಿ ಬಲಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಾಲೆಯ ಮಾಲಕ, ನಿರ್ದೇಶಕರಲ್ಲದೆ, ಪ್ರಾಂಶುಪಾಲರು ಮತ್ತು ಇಬ್ಬರು ಶಿಕ್ಷಕರು ಘಟನೆಯಲ್ಲಿ ಭಾಗಿಯಾಗಿದ್ದಾರೆ ಎನ್ನುವ ಆರೋಪದ ಮೇಲೆ ಅವರನ್ನ ಬಂಧಿಸಲಾಗಿದೆ.  ಇನ್ನು ವಿದ್ಯಾರ್ಥಿಯ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಕತ್ತು ಹಿಸುಕಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ವಿವರ: ಈ ಕೃತ್ಯವನ್ನು ಡಿಎಲ್ ಪಬ್ಲಿಕ್ ಸ್ಕೂಲ್ ಮಾಲಕ ಜಸೋಧನ್ ಸಿಂಗ್ ಅವರು ‘ತಾಂತ್ರಿಕ ಆಚರಣೆಗಳನ್ನು’ ನಂಬಿ ಎಸಗಿದ್ದಾರೆ ಎಂದು ಹೇಳಲಾಗುತ್ತಿದೆ. ಅವರು ಶಾಲೆಯ ನಿರ್ದೇಶಕ ದಿನೇಶ್ ಬಘೇಲ್ ಅವರಲ್ಲಿ ಶಾಲೆ ಮತ್ತು ಅವರ ಕುಟುಂಬದ ಏಳಿಗೆಗಾಗಿ ಮಗುವನ್ನು ಬಲಿ ನೀಡುವಂತೆ ಕೇಳಿದ್ದಾರೆ ಎನ್ನಲಾಗಿದೆ.

ಈ ಕೃತ್ಯದಲ್ಲಿ ಪ್ರಾಂಶುಪಾಲ ಲಕ್ಷ್ಮಣ್ ಸಿಂಗ್ ಮತ್ತು ಇಬ್ಬರು ಶಿಕ್ಷಕರಾದ ರಾಮಪ್ರಕಾಶ್ ಸೋಲಂಕಿ ಮತ್ತು ವೀರಪಾಲ್ ಸಿಂಗ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಡಿಎಲ್ ಪಬ್ಲಿಕ್ ಶಾಲೆಯ ಎರಡನೇ ತರಗತಿಯಲ್ಲಿ ಓದುತ್ತಿದ್ದ ಕೃತಾರ್ಥ್ (11) ಬಲಿಯಾದ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. 

ಶಾಲೆಯ ಹಾಸ್ಟೆಲ್‌ನಿಂದ ಸೆಪ್ಟೆಂಬರ್ 23 ರಂದು ವಿದ್ಯಾರ್ಥಿಯನ್ನು ಶಿಕ್ಷಕ ರಾಮಪ್ರಕಾಶ್ ಸೋಲಂಕಿ, ದಿನೇಶ್ ಬಾಘೇಲ್ ಮತ್ತು ಶಾಲೆಯ ಮಾಲಕ ಜಸೋಧನ್ ಸಿಂಗ್ ಅವರು ಅಪಹರಿಸಿದ್ದರು. ಜಸೋಧನ್ ಸಿಂಗ್ ಅವರು ‘ತಂತ್ರ’ ಅಭ್ಯಾಸ ನಂಬಿದ್ದು, ಶಾಲೆ ಮತ್ತು ಅವರ ಕುಟುಂಬದ ಏಳಿಗೆಗಾಗಿ ಮಗುವನ್ನು ತ್ಯಾಗ ಮಾಡುವಂತೆ ಕೇಳಿಕೊಂಡರು ಎಂದು ಹೇಳಲಾಗಿದೆ.

- Advertisement -
spot_img

Latest News

error: Content is protected !!