Thursday, April 24, 2025
Homeಅಪರಾಧಅಕ್ರಮ ಮರಳುಗಾರಿಕೆ ತಡೆಗೆ ದ.ಕ. ಜಿಲ್ಲಾಧಿಕಾರಿ ಆದೇಶ

ಅಕ್ರಮ ಮರಳುಗಾರಿಕೆ ತಡೆಗೆ ದ.ಕ. ಜಿಲ್ಲಾಧಿಕಾರಿ ಆದೇಶ

spot_img
- Advertisement -
- Advertisement -

ಮಂಗಳೂರು: ಅಕ್ರಮ ಮರಳುಗಾರಿಕೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ರಚಿಸಿದ್ದ 6 ಸದಸ್ಯರ ತನಿಖಾ ತಂಡ ತಮ್ಮ ವರದಿ ಸಲ್ಲಿಸಿದ್ದು, ಇದೀಗ ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಅವರು ಉಳ್ಳಾಲದ ಪಾವೂರು ಉಳಿಯ ಕುದ್ರು ಬಳಿ ಅಕ್ರಮ ಮರಳುಗಾರಿಕೆ ನಡೆಯುವ ಆರೋಪದ ಹಿನ್ನೆಲೆಯಲ್ಲಿ ಮತ್ತೆ ಧ್ವನಿ ಎತ್ತಿದ್ದಾರೆ. ಆ ಪರಿಸರದಲ್ಲಿ ವಾಸಿಸುವ ನಾಗರಿಕರು, ಪರಿಸರ ಹಾಗೂ ಇತರ ಸಂಪನ್ಮೂಲಕ್ಕೆ ತೊಂದರೆಯಾಗದಂತೆ ಹಾಗೂ ಅಕ್ರಮ ಗಣಿಗಾರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲ ಇಲಾಖೆಗಳೂ ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಆದೇಶಿಸಿದ್ದಾರೆ.

ಇಷ್ಟೆಲ್ಲಾ ಆದೇಶಗಳ ನಡುವೆಯು ಎಲ್ಲಿಯಾದರೂ ಅನಧಿಕೃತ ಗಣಿಗಾರಿಕೆ ನಡೆಯುವುದು ಕಂಡು ಬಂದರೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ತಿಳಿಸಿದ್ದಾರೆ..

ಜಿಲ್ಲಾಧಿಕಾರಿಯ ಶಿಫಾರಸುಗಳು;  ಮರಳುಗಾರಿಕೆ ಮಾಡುವ ದೋಣಿಗಳನ್ನು ಜಫ್ತಿ ಮಾಡಿ ಸರಕಾರದ ವಶಕ್ಕೆ ಪಡೆಯಬೇಕು, ಮರಳು ಸಂಗ್ರಹಿಸುವ ಸಮೀಪದ ಜಟ್ಟಿಗಳಲ್ಲಿ(ಅಡ್ಯಾರು, ವಳಚ್ಚಿಲ್‌, ಗಾಡಿಬೆ„ಲ್‌ ಗ್ರಾಮದ ನದಿ ತೀರದಲ್ಲಿರುವ ಮರಳುಜಟ್ಟಿ) ಮರಳು ದಾಸ್ತಾನು ಮಾಡದಂತೆ ತಡೆಗಟ್ಟುವುದು, ಅನಧಿಕೃತ ಮರಳು ದಾಸ್ತಾನು ಕಂಡುಬಂದರೆ ಭೂಮಾಲಕರ ವಿರುದ್ಧ ತತ್‌ಕ್ಷಣ ಮೊಕದ್ದಮೆ ದಾಖಲಿಸಬೇಕು ಎಂದು ಸಮಿತಿಯಲ್ಲಿ ರುವ ಹಿರಿಯ ಭೂವಿಜ್ಞಾನಿ ಶಿಫಾರಸು ಮಾಡಿದ್ದಾರೆ.

ಇನ್ನು ಈ ಕುರಿತಂತೆ ಮಂಗಳೂರು ನಗರ ಉತ್ತರ ಎಸಿಪಿಯವರು ತಮ್ಮ ಶಿಫಾರಸು ನೀಡಿದ್ದು, ‘ಅಕ್ರಮ ಮರಳುಗಾರಿಕೆ ನಡೆಸುವವರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರಗಿಸಬೇಕು, ಗಣಿ ಇಲಾಖೆ ಜತೆಗೆ ಸಮನ್ವಯತೆಯಿಂದ ರಾತ್ರಿ ಗಸ್ತು ತಿರುಗಲು ಪೊಲೀಸ್‌ ಸಿಬಂದಿ ನೇಮಕ ಮಾಡಬೇಕು ಎಂದು ವರದಿ ಕೊಟ್ಟಿದ್ದಾರೆ. ತಮ್ಮ ವರದಿಯಲ್ಲಿ ಮಂಗಳೂರು ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರರು, ‘ತಾಲೂಕು ಟಾಸ್ಕ್ಫೋರ್ಸ್‌ ಸಮಿತಿಯಿಂದ ಚಾಲಿತ ದಳ ನೇಮಿಸಿಕೊಂಡು ಬಾಧಿತ ಪ್ರದೇಶಕ್ಕೆ ರಾತ್ರಿ ಗಸ್ತು ತಿರುಗಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.

- Advertisement -
spot_img

Latest News

error: Content is protected !!