Wednesday, June 3, 2026
Homeಕರಾವಳಿವಕೀಲರ ಸಂಘ (ರಿ) ಬೆಳ್ತಂಗಡಿ ಇದರ ವಾರ್ಷಿಕ ಮಹಾಸಭೆ 

ವಕೀಲರ ಸಂಘ (ರಿ) ಬೆಳ್ತಂಗಡಿ ಇದರ ವಾರ್ಷಿಕ ಮಹಾಸಭೆ 

- Advertisement -
- Advertisement -

ಬೆಳ್ತಂಗಡಿ: ಇಲ್ಲಿನ ಶ್ರೀ ಮಂಜುನಾಥ ಸ್ವಾಮಿ ಕಲಾಭವನದ ಸಭಾಭವನದಲ್ಲಿ ವಕೀಲರ ಸಂಘ (ರಿ) ಬೆಳ್ತಂಗಡಿ ಇದರ ವಾರ್ಷಿಕ ಮಹಾಸಭೆಯು ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷರಾದ ವಸಂತ ಮರಕಡ ಇವರ ಅಧ್ಯಕ್ಷತೆಯಲ್ಲಿ 2024 ಸೆ.27 ಶುಕ್ರವಾರದಂದು ಜರಗಿತು.

ವಕೀಲರ ಸಂಘದ ಉಪಾಧ್ಯಕ್ಷರಾದ ಶ್ರೀ ಅಶೋಕ್ ಕರಿಯನೆಲ ಎಲ್ಲರನ್ನು ಸ್ವಾಗತಿಸಿದರು. ಸಭೆಯಲ್ಲಿ ವಾರ್ಷಿಕ ವರದಿ ವಾಚನವನ್ನು  ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿಯಾದ ನವೀನ್ ಬಿ.ಕೆ ವಾಚಿಸಿದರು. ಲೆಕ್ಕಪತ್ರವನ್ನು ವಕೀಲರ ಸಂಘದ ಕೋಶಾಧಿಕಾರಿಯಾದ ಶ್ರೀ ಪ್ರಶಾಂತ್ ಎಂ ಮಂಡಿಸಿದರು.

ಈ ಕಾರ್ಯಕ್ರಮದಲ್ಲಿ  ವಕೀಲರ ಸಂಘದ ವಿವಿಧ ಕಾರ್ಯಕ್ರಮಗಳಲ್ಲಿ ಭೋಜನದ ವ್ಯವಸ್ಥೆಯನ್ನು ಏರ್ಪಡಿಸಿದ್ದ ಸಂಘದ ಸದಸ್ಯರಾದ ಶಶಿಕಿರಣ್ ಜೈನ್,  ಶ್ರೀನಿವಾಸ ಗೌಡ ಬೆಳಾಲು ಮತ್ತು ಗಣೇಶ್ ಗೌಡ ಇವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಭೋಜನದ ವ್ಯವಸ್ಥೆಯಲ್ಲಿ ಶ್ರೀ ಎ ಮನೋಹರ್ ಕುಮಾರ್ ಇವರಿಗೆ ಸ್ಮರಣಿಕೆ ನೀಡಲಾಯಿತು

ಮಹಾಸಭೆಯಲ್ಲಿ ಅಧ್ಯಕ್ಷೀಯ ನೆಲೆಯಲ್ಲಿ ಸಂಘದ ಅಧ್ಯಕ್ಷರಾದ ವಸಂತ ಮರಕಡ ಇವರು ಅಧ್ಯಕ್ಷೀಯ ಭಾಷಣ ನೆರವೇರಿಸಿದರು. ಕಾರ್ಯಕ್ರಮದ ಕೊನೆಗೆ ಸಂಘದ ಪ್ರಧಾನ ಕಾರ್ಯದರ್ಶಿಯಾದ ಶ್ರೀ ನವೀನ್ ಬಿ.ಕೆ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.

ವೇದಿಕೆಯಲ್ಲಿ ವಕೀಲರ ಸಂಘದ ಪದಾಧಿಕಾರಿಗಳು ಹಾಗೂ ಹಿರಿಯ ವಕೀಲರ ಸಮಿತಿಯ ಅಧ್ಯಕ್ಷರಾದ ಶ್ರೀ ಅಲೋಸಿಯಸ್ ಎಸ್ ಲೋಬೊ ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ನಿರೂಪಣೆಯನ್ನು ವಕೀಲರಾದ ಶ್ರೀ ಉದಯ ಕುಮಾರ್ ಬಿ.ಕೆ ನಡೆಸಿಕೊಟ್ಟರು. ಕಾರ್ಯಕ್ರಮದ ಭೋಜನದ ವ್ಯವಸ್ಥೆಯನ್ನು ಶ್ರೀನಿವಾಸ್ ಗೌಡ ಬೆಳಾಲು ಮಾಡಿರುತ್ತಾರೆ.

- Advertisement -

Latest News

error: Content is protected !!