Monday, April 29, 2024
Homeಕರಾವಳಿಕಡಬ:ನೆಲ್ಯಾಡಿಯಲ್ಲಿ ರಬ್ಬರ್ ಮ್ಯಾಟ್ ಕದಿಯಲು ಯತ್ನಿಸುತ್ತಿದ್ದಾಗ ಸಿಕ್ಕಿ ಬಿದ್ದ ಆರೋಪಿಗಳು

ಕಡಬ:ನೆಲ್ಯಾಡಿಯಲ್ಲಿ ರಬ್ಬರ್ ಮ್ಯಾಟ್ ಕದಿಯಲು ಯತ್ನಿಸುತ್ತಿದ್ದಾಗ ಸಿಕ್ಕಿ ಬಿದ್ದ ಆರೋಪಿಗಳು

spot_img
- Advertisement -
- Advertisement -

ಕಡಬನೆಲ್ಯಾಡಿಯ ಬಾರೊಂದರ ಹಿಂಭಾಗದಲ್ಲಿ ರಬ್ಬರ್ ಮ್ಯಾಟ್ ಕದಿಯಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಬೈಕ್ ಮೆಕ್ಯಾನಿಕ್  ಸಿದ್ದೀಕ್ ಮತ್ತು ಆಟೋರಿಕ್ಷಾ ಚಾಲಕ ಸುನಿಲ್   ಸಿಕ್ಕಿಬಿದ್ದ ಆರೋಪಿಗಳು 

 ಇಲ್ಲಿನ ಕ್ಲಾಸಿಕ್ ಬಾರ್ ನ   ಹಿಂಭಾಗದ ಕಂಪೌಂಡು ಒಳಗಡೆ ಇಟ್ಟಿದ್ದ ಗ್ರೀನ್ ಬಣ್ಣದ 3 ರಬ್ಬರ್ ಮ್ಯಾಟ್  ಕಳ್ಳತನ ಮಾಡಿ ಮಾರುತಿ ಓಮ್ನಿ ಕಾರಿನಲ್ಲಿ  ತುಂಬಿಸಿ ಇಟ್ಟಿದ್ದರು. ಈ ವೇಳೆ ಬಾರ್ ಸಿಬ್ಬಂದಿ ಗಮನಿಸಿ ಆರೋಪಿಗಳನ್ನು ಹಿಡಿಯಲು ಮುಂದಾದ ವೇಳೆ ತಪ್ಪಿಸಿ ಪರಾರಿಯಾಗಿದ್ದರು.

 ಈ ವಿಚಾರವನ್ನು ನೆಲ್ಯಾಡಿ ಹೊರಠಾಣೆಯ ಠಾಣಾಧಿಕಾರಿಯ ಗಮನಕ್ಕೆ ತಂದಿದ್ದು ಈ ವೇಳೆ ವಾಹನ ಸಹಿತ  ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಳ್ಳತನ ಮಾಡಿದ 3 ರಬ್ಬರ್ ಮ್ಯಾಟ್ ನ ಅಂದಾಜು ಮೌಲ್ಯ ರೂ:10,000/ ಎನ್ನಲಾಗಿದೆ.

- Advertisement -
spot_img

Latest News

error: Content is protected !!