Wednesday, June 24, 2026
Homeಕರಾವಳಿಮಂಗಳೂರುಮದ್ಯ ಸೇವಿಸಿ ಹತ್ತಿರ ಬಂದ ರೂಂ ಬಾಯ್ ; ಎತ್ತಿ ಎಸೆದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ...

ಮದ್ಯ ಸೇವಿಸಿ ಹತ್ತಿರ ಬಂದ ರೂಂ ಬಾಯ್ ; ಎತ್ತಿ ಎಸೆದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆನೆ!

- Advertisement -
- Advertisement -

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆನೆ ವ್ಯಕ್ತಿಯೊಬ್ಬನನ್ನು ಸೊಂಡಿಲಿನಿಂದ ಎಳೆದು ಹಾಕಿದ ಘಟನೆ ನಿನ್ನೆ ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ನಡೆದಿದೆ.‌

ನಿನ್ನೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಹಿನ್ನೆಲೆಯಲ್ಲಿ ಸ್ವಾಗತಕ್ಕಾಗಿ ಆನೆ ಸವಾರಿ ಮಂಟಪದ ಬಳಿ ನಿಂತಿತ್ತು. ಈ ವೇಳೆ ಕೆಲವರು ಆನೆ ಬಳಿ ನಿಂತು ಪೋಟೋ ತೆಗೆಸಿಕೊಳ್ಳುತ್ತಿದ್ದರು.

ಇದೇ ವೇಳೆ ಸುಬ್ರಮಣ್ಯದಲ್ಲಿ ರೂಂ ಬಾಯ್ ಆಗಿರುವ ವ್ಯಕ್ತಿಯೊಬ್ಬರು ಆನೆಯ ಸಮೀಪ ಬಂದಿದ್ದು, ಆಗ ಆನೆ ಏಕಾಏಕಿ ತನ್ನ ಸೊಂಡಿಲಿನಿಂದ ಎತ್ತಿ ಎಸೆದಿದೆ.

ಆನೆಯಿಂದ ಎಸೆಯಲ್ಪಟ್ಟ ರೂಂ ಬಾಯ್ ಮದ್ಯ ಸೇವಿಸಿದ್ದ ಕಾರಣ ಆನೆ ಸೊಂಡಿಲಿನಿಂದ ಎತ್ತಿ ಎಸೆದಿದೆ ಎಂದು ಹೇಳಲಾಗಿದ್ದು, ಅದೃಷ್ಟವಶಾತ್ ಯಾವುದೇ ಗಾಯಗಳಾಗಿಲ್ಲ.

ನಿನ್ನೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಡಿಸಿಎಂ ಡಿ.ಕೆ‌. ಶಿವಕುಮಾರ್ ಭೇಟಿ ನೀಡುವ ಕೆಲವೇ ಹೊತ್ತಿನ ಮೊದಲು ಈ ಘಟನೆ ನಡೆದಿದೆ.

- Advertisement -

Latest News

error: Content is protected !!