Friday, August 28, 2026
HomeUncategorizedರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ಡಿ ಗ್ಯಾಂಗ್:ಇತ್ತ ಡಿ ಗ್ಯಾಂಗ್ ಸಿನಿಮಾ ಮಾಡಲು ಟೈಟಲ್...

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ಡಿ ಗ್ಯಾಂಗ್:ಇತ್ತ ಡಿ ಗ್ಯಾಂಗ್ ಸಿನಿಮಾ ಮಾಡಲು ಟೈಟಲ್ ಗಾಗಿ ಮುಗಿ ಬೀಳ್ತಿದ್ದಾರೆ ನಿರ್ಮಾಪಕರು

- Advertisement -
- Advertisement -

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಡಿ ಗ್ಯಾಂಗ್ ಜೈಲು ಸೇರಿ ಕಂಬಿ ಎಣಿಸ್ತಿದ್ರೆ ಇತ್ತ ಡಿ ಗ್ಯಾಂಗ್ ಸಿನಿಮಾ ಮಾಡಲು ಟೈಟಲ್ ಗಾಗಿ ನಿರ್ಮಾಪಕರು ಮುಗಿ ಬೀಳ್ತಿದ್ದಾರೆ  ಅನ್ನೋ ವಿಚಾರ ಸದ್ದು ಮಾಡ್ತಿದೆ.

ಲ್ಲೇ ಡಿ ಗ್ಯಾಂಗ್ ಸಿನಿಮಾ ಮಾಡೋದಕ್ಕಾಗಿ ನಿರ್ಮಾಪಕರು ಟೈಟಲ್ ನೋಂದಣಿಗೆ ಮುಗಿ ಬಿದ್ದಿದ್ದರು. ಆದ್ರೇ ಆ ಟೈಟಲ್ ನೀಡಲಾಗಿರಲಿಲ್ಲ. ಈಗ ಖೈದಿ ನಂ.6106 ಟೈಟಲ್ ಗೆ ಪುಲ್ ಡಿಮ್ಯಾಂಡ್ ಅಂತೆ.ಈ ಸಂಬಂಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಡಿ ಗ್ಯಾಂಗ್ ಟೈಟಲ್ ನೀಡುವಂತೆ ನಿರ್ದೇಶಕ ರಾಕಿ ಸೋಮ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ದರ್ಶನ್ ಪ್ರಕರಣ ಕೋರ್ಟ್ ನಲ್ಲಿರುವ ಕಾರಣ, ಪೆಂಡಿಂಗ್ ನಲ್ಲಿ ಇರಿಸಲಾಗಿದೆ. ಈ ಮೂಲಕ ಡಿ ಗ್ಯಾಂಗ್ ಟೈಟಲ್ ನೀಡಿಲ್ಲ.

ಇದೀಗ ಡಿ ಗ್ಯಾಂಗ್ ಟೈಟಲ್ ಬಳಿಕ ಖೈದಿ ನಂ.6106 ಗೆ ನಿರ್ಮಾಪಕ ಭದ್ರಾವತಿಯ ಕುಮಾರ್ ಎಂಬವರು ಅರ್ಜಿಯನ್ನು ಸಲ್ಲಿಸಿದ್ದಾರೆ. ಆದ್ರೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾತ್ರ ಈ ಟೈಟಲ್ ಗೂ ಅನುಮತಿ ನೀಡಿಲ್ಲ. ಹೀಗಾಗಿ ಡಿ ಗ್ಯಾಂಗ್, ಹಾಗೂ ಖೈದಿ ನಂ.6106 ಟೈಟಲ್ ಗೆ ಪುಲ್ ಡಿಮ್ಯಾಂಡ್ ಹೆಚ್ಚಾಗಿದೆ.

ನಟ ದರ್ಶನ್ ಅಂಡ್ ಗ್ಯಾಂಗ್ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತ ಡಿ ಗ್ಯಾಂಗ್ ಹಾಗೂ ಖೈದಿ ನಂಬರ್ 6106 ಟೈಟಲ್ ಯಾರಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅನುಮತಿ ನೀಡುತ್ತದೆ ಅನ್ನೋದು ಕುತೂಹಲ ಮೂಡಿಸಿದೆ.

- Advertisement -

Latest News

error: Content is protected !!