Wednesday, July 15, 2026
Homeಕರಾವಳಿಉಡುಪಿಬಿಜೆಪಿ ರೈತ ಮೋರ್ಛಾದಿಂದ ಉಡುಪಿ ಡಿಸಿ ಕಚೇರಿಗೆ ಮುತ್ತಿಗೆ

ಬಿಜೆಪಿ ರೈತ ಮೋರ್ಛಾದಿಂದ ಉಡುಪಿ ಡಿಸಿ ಕಚೇರಿಗೆ ಮುತ್ತಿಗೆ

- Advertisement -
- Advertisement -

ಉಡುಪಿ: ಹಾಲು, ಪೆಟ್ರೋಲ್ ಸೇರಿದಂತೆ ವಿವಿಧ ಬೆಲೆ ಏರಿಕೆ ಕುರಿತಂತೆ ಬಿಜೆಪಿ ರೈತ ಮೋರ್ಛಾದಿಂದ ಉಡುಪಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಯಿತು.

ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು, ಹಾಲಿನ ದರ ಏರಿಕೆಗೆ ಆಕ್ರೋಶ ವ್ಯಕ್ತಪಡಿಸಿದರು.

ಮಳೆಯ ನಡುವೆಯೂ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ರೈತ ಮೋರ್ಛಾ ಕಾರ್ಯಕರ್ತರು,
ಪೊಲೀಸರ ಜೊತೆ ಜಟಾಪಟಿ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿಯ ಗೇಟ್ ಮುಚ್ಚಿ ಪ್ರತಿಭಟನಾಕಾರರನ್ನು ಪೊಲೀಸರು ತಡೆದಿದ್ದು ರೈತ ಮೋರ್ಛಾದ ರಾಜ್ಯ ಮುಖಂಡರು ಕೂಡಾ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

- Advertisement -

Latest News

error: Content is protected !!