Friday, June 5, 2026
Homeತಾಜಾ ಸುದ್ದಿವಿದ್ಯಾರ್ಥಿನಿಯನ್ನೇ ಕಿಡ್ನ್ಯಾಪ್ ಮಾಡಿದ ಸರ್ಕಾರಿ ಶಾಲಾ ಶಿಕ್ಷಕ

ವಿದ್ಯಾರ್ಥಿನಿಯನ್ನೇ ಕಿಡ್ನ್ಯಾಪ್ ಮಾಡಿದ ಸರ್ಕಾರಿ ಶಾಲಾ ಶಿಕ್ಷಕ

- Advertisement -
- Advertisement -

ತಮಿಳುನಾಡು:  ಸರ್ಕಾರಿ ಶಾಲಾ ಶಿಕ್ಷಕನೊಬ್ಬ ಪಿಯು ವಿದ್ಯಾರ್ಥಿನಿಯನ್ನು ಅಪಹರಿಸಿ ಘಟನೆ  ತಮಿಳುನಾಡಿನ  ಕೃಷ್ಣಗಿರಿ ಜಿಲ್ಲೆಯ ಮಾಥೂರಿನಲ್ಲಿ ನಡೆದಿದೆ.

ಮೂರ್ತಿ ಮತ್ತು ಕಾವ್ಯ ದಂಪತಿ ಕೃಷ್ಣಗಿರಿ ಜಿಲ್ಲೆಯ ಮಾಥೂರಿನ ಬಳಿಯಿರುವ ಜಿಂಜಂಪತಿಯ ನಿವಾಸಿಗಳು. ದಂಪತಿಗೆ 16 ವರ್ಷದ ಮಗಳಿದ್ದಾಳೆ. ಕೂಲಿಯನ್ನೇ ನಂಬಿರುವ ದಂಪತಿ ತಮ್ಮ ಮಗಳೊಂದಿಗೆ ತಿರುವಣ್ಣಮಲೈ ಜಿಲ್ಲೆಯ ಮೇಲ್ಸೆಂಗಮ್​ನಲ್ಲಿ ಕೂಲಿಯಾಳುಗಳಾಗಿ ಕೆಲಸ ಮಾಡುತ್ತಿದ್ದರು. ದಂಪತಿಯ ಮಗಳು ತಿರುವಣಮಲೈನ ಡ್ಯಾನಿಯಲ್​ ಮಿಷನ್​ ಸ್ಕೂಲ್​ನಲ್ಲಿ ಪ್ರಥಮ ವರ್ಷದ ಪಿಯು ವಿದ್ಯಾರ್ಥಿನಿಯಾಗಿದ್ದಾಳೆ.

 ಏಪ್ರಿಲ್​ 6ರಂದು ದಂಪತಿ ತನ್ನ ಮಗಳೊಂದಿಗೆ ತಮಿಳುನಾಡು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಮಾಡಲು ತವರಿಗೆ ತೆರಳಿದ್ದರು. ಅದೇ ದಿನ ಇದ್ದಕ್ಕಿದ್ದಂತೆ ಮಗಳು ಕಾಣೆಯಾಗಿದ್ದಾಳೆ.  ಸಾಕಷ್ಟು ಹುಡುಕಾಟ ನಡೆಸಿದರೂ ಮಗಳು ಸಿಗದೇ ಇದ್ದಾಗ ಗಾಬರಿಗೊಂಡ ದಂಪತಿ ಮಾಥೂರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತನಿಖೆ ನಡೆಸಿದ ಪೊಲೀಸರಿಗೆ ಮಹತ್ವದ ಮಾಹಿತಿಯೊಂದು ಸಿಕ್ಕಿದೆ. ವಿದ್ಯಾರ್ಥಿನಿಯನ್ನು ತಿರುವಣ್ಣಾಮಲೈ ಜಿಲ್ಲೆಯ ನಾಗನೂರು ಗ್ರಾಮದ ಸರ್ಕಾರಿ ಶಾಲೆಯ ದೈಹಿಕ ಶಿಕ್ಷಕ ಚರಣ್​ರಾಜ್​ (31) ಆಕೆಯನ್ನು ಅಪಹರಿಸಿರುವುದು ಗೊತ್ತಾಗಿದೆ. ಬಲವಂತವಾಗಿ ಮದುವೆ ಆಗುವ ಉದ್ದೇಶದಿಂದ ಕಿಡ್ನಾಪ್​ ಮಾಡಿ ತನ್ನ ಮನೆಯಲ್ಲಿ ಇಟ್ಟಿಕೊಂಡಿದ್ದಾನೆ. ಆತನ ಸುಳಿವು ಪಡೆದು ಕಾರ್ಯಾಚರಣೆಗೆ ಇಳಿದ ಪೊಲೀಸರು ಆತನನ್ನು ಬಂಧಿಸಿ ವಿದ್ಯಾರ್ಥಿನಿಯನ್ನು ರಕ್ಷಿಸಿದ್ದಾರೆ.

ಅನೇಕ ದಿನಗಳಿಂದ ಮದುವೆ ಆಗದೇ ಉಳಿದಿದ್ದಕ್ಕೆ ವಿದ್ಯಾರ್ಥಿನಿಯನ್ನು ಕಿಡ್ನಾಪ್​ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.

- Advertisement -

Latest News

error: Content is protected !!