Saturday, May 18, 2024
Homeತಾಜಾ ಸುದ್ದಿಕೊರೋನಾ ಲಸಿಕೆ ಪಡೆದ ಮರುದಿನವೇ ನಟ ವಿವೇಕ್​ಗೆ ಹೃದಯಾಘಾತ!

ಕೊರೋನಾ ಲಸಿಕೆ ಪಡೆದ ಮರುದಿನವೇ ನಟ ವಿವೇಕ್​ಗೆ ಹೃದಯಾಘಾತ!

spot_img
- Advertisement -
- Advertisement -

ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಟ ವಿವೇಕ್​ ಅವರಿಗೆ ಇಂದು (ಏ.16) ಹೃದಯಾಘಾತ ಸಂಭವಿಸಿದ್ದು, ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿವೇಕ್​ ಅವರ ಆರೋಗ್ಯದ ಸ್ಥಿತಿ ಗಂಭೀರವಾಗಿದ್ದು, ವೈದ್ಯರ ತಂಡ ಚಿಕಿತ್ಸೆ ಮುಂದುವರಿಸಿದೆ. ಶುಕ್ರವಾರ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ ಮತ್ತು ಆಂಜಿಯೋಗ್ರಾಮ್​ ಮಾಡಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಈ ಕಮಿಡಿಯನ್​ ನಿನ್ನೆಯಷ್ಟೇ ಕೊರೊನಾ ವೈರಸ್​ ಲಸಿಕೆ ಪಡೆದುಕೊಂಡಿದ್ದರು. ಕಾಕತಾಳೀಯ ಎಂಬಂತೆ ಮರುದಿನವೇ ಅವರಿಗೆ ಹೃದಯಾಘಾತ ಸಂಭವಿಸಿದೆ. ಅಲ್ಲದೇ ಎಲ್ಲರೂ ಕೊರೊನಾ ಲಸಿಕೆಯನ್ನ ಪಡೆದುಕೊಳ್ಳಿ ಅಂತಾ ಜನರಲ್ಲಿ ಮನವಿ ಮಾಡಿದ್ದರು.

- Advertisement -
spot_img

Latest News

error: Content is protected !!