Saturday, August 29, 2026
Homeಕರಾವಳಿಶಿರಾಡಿ ಘಾಟ್ ನಲ್ಲಿ ಉರುಳಿ ಬಿದ್ದ ಟ್ಯಾಂಕರ್: ಸಂಚಾರ ಸ್ಥಗಿತ, ವಾಹನ ಸವಾರರ ಪರದಾಟ

ಶಿರಾಡಿ ಘಾಟ್ ನಲ್ಲಿ ಉರುಳಿ ಬಿದ್ದ ಟ್ಯಾಂಕರ್: ಸಂಚಾರ ಸ್ಥಗಿತ, ವಾಹನ ಸವಾರರ ಪರದಾಟ

- Advertisement -
- Advertisement -

ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿ 2ನೇ ತಿರುವಿನಲ್ಲಿ ಗ್ಯಾಸ್ ತುಂಬಿದ ಟ್ಯಾಂಕರ್ ಮಗುಚಿ ಬಿದ್ದು ವಾಹನ ಸಂಚಾರ ಸ್ಥಗಿತಗೊಂಡಿದೆ.

ಸಕಲೇಶಪುರ ಠಾಣಾ ವ್ಯಾಪ್ತಿಯ ಶಿರಾಡಿ ಎರಡನೇ ತಿರುವಿನಲ್ಲಿ ಟ್ಯಾಂಕರ್ ಮಗುಚಿಬಿದ್ದ ಘಟನೆ ನಡೆದಿದೆ. ಮಂಗಳೂರಿನಿಂದ ಬೆಂಗಳೂರು ಕಡೆಗೆ ಅಡುಗೆ ಗ್ಯಾಸ್ ತುಂಬಿಕೊಂಡು ಹೋಗುತ್ತಿದ್ದ ಟ್ಯಾಂಕರ್ ಬೆಳಗ್ಗೆ 10.30 ರ ವೇಳೆಗೆ ಮಗುಚಿ ಬಿದ್ದಿದೆ. ಇದರಿಂದಾಗಿ ಸಂಚಾರ ಸ್ಥಗಿತವಾಗಿದ್ದು, ರಾತ್ರಿ ವೇಳೆ ಸಂಚಾರ ಆರಂಭಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇನ್ನು ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಪೊಲೀಸರು ಭೇಟಿ ನೀಡಿದ್ದು, ರಸ್ತೆ ತಡೆಯಲಾಗಿದೆ. ಬೆಂಗಳೂರಿಗೆ ತೆರಳುವವರನ್ನು ಪರ್ಯಾಯವಾಗಿ ಮಾಣಿಯಿಂದ ಮೈಸೂರು ರಸ್ತೆಯ ಮೂಲಕ ಕಳುಹಿಸಿಕೊಡಲಾಗುತ್ತಿದೆ.

- Advertisement -

Latest News

error: Content is protected !!