Thursday, June 4, 2026
Homeಕರಾವಳಿಉಪ್ಪಿನಂಗಡಿ: ಲಾರಿ- ಬೈಕ್ ನಡುವೆ ಅಪಘಾತ, ಮಹಿಳೆ ಸಾವು

ಉಪ್ಪಿನಂಗಡಿ: ಲಾರಿ- ಬೈಕ್ ನಡುವೆ ಅಪಘಾತ, ಮಹಿಳೆ ಸಾವು

- Advertisement -
- Advertisement -

ಉಪ್ಪಿನಂಗಡಿ: ಸಿಮೆಂಟ್ ಮಿಕ್ಸರ್ ವಾಹನ ಮತ್ತು ಬೈಕ್ ನಡುವಿನ ರಸ್ತೆ ಅಪಘಾತದಲ್ಲಿ ಬೈಕ್ ಸಹ ಸವಾರೆಯೊಬ್ಬರು ಮೃತಪಟ್ಟ ಘಟನೆ ಇಂದು ರಾಷ್ಟ್ರೀಯ ಹೆದ್ದಾರಿ 75ರ ಉಪ್ಪಿನಂಗಡಿಯಲ್ಲಿ ನಡೆದಿದೆ.

ಸರಳಿಕಟ್ಟೆ ನಿವಾಸಿ ಸಖಿನಾ ಮೃತಪಟ್ಟ ದುರ್ದೈವಿ. ಇವರ ಪತಿ ರಫೀಕ್ ರೊಂದಿಗೆ ಬೈಕ್ ನಲ್ಲಿ ಸಂಚರಿಸುವಾಗ ಉಪ್ಪಿನಂಗಡಿಯ ಆದಿತ್ಯ ಹೋಟೆಲ್ ಬಳಿ ಈ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಪತಿಗೂ ಗಾಯಗಳಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸಿಮೆಂಟ್ ಮಿಕ್ಸರ್ ವಾಹನವು ಬಿ.ಸಿ.ರೋಡ್ ನಿಂದ ಉದನೆ ಕಡೆಗೆ ಹೋಗುತ್ತಿತ್ತು. ಈ ವೇಳೆ ಢಿಕ್ಕಿ ಸಂಭವಿಸಿದೆ. ಪುತ್ತೂರು ಸಂಚಾರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು.

- Advertisement -

Latest News

error: Content is protected !!