Friday, June 26, 2026
Homeತಾಜಾ ಸುದ್ದಿಕೇರಳ: ಚಿನ್ನ ಕಳ್ಳಸಾಗಣೆಯ ಆರೋಪಿ ಸ್ವಪ್ನಾ ಸುರೇಶ್ ಬೆಂಗಳೂರಲ್ಲಿ ಬಂಧನ

ಕೇರಳ: ಚಿನ್ನ ಕಳ್ಳಸಾಗಣೆಯ ಆರೋಪಿ ಸ್ವಪ್ನಾ ಸುರೇಶ್ ಬೆಂಗಳೂರಲ್ಲಿ ಬಂಧನ

- Advertisement -
- Advertisement -

ಬೆಂಗಳೂರು: ಕೇರಳ ಚಿನ್ನದ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಳನ್ನು ಇಂದು ರಾತ್ರಿ ಬೆಂಗಳೂರಿನಿಂದ ಬಂಧಿಸಲಾಗಿದೆ.

ತಿರುವನಂತಪುರಂನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಾಜತಾಂತ್ರಿಕ ಸಾಮಾನುಗಳ ಮೂಲಕ 30 ಕೆಜಿ ಚಿನ್ನವನ್ನು ಕಳ್ಳಸಾಗಣೆ ಮಾಡಿದ್ದಕ್ಕಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬುಕ್ ಮಾಡಿದ ನಾಲ್ವರು ಆರೋಪಿಗಳಾದ ಸ್ವಪ್ನ ಪ್ರಭ ಸುರೇಶ್,ಫಾಜೀಲ್ ಫರೀದ್, ಸಂದೀಪ್ ನಾಯರ್ ಹಾಗೂ ಸರೀತ್ ಕುಮಾರ್ ರಲ್ಲಿ ಸ್ವಪ್ನಾ ಸುರೇಶ್ ಎರಡನೇ ಆರೋಪಿಯಾಗಿದ್ದಾಳೆ.

ಸ್ವಪ್ನಾ ಸುರೇಶ್ ಯುಎಇ ಕಾನ್ಸುಲೇಟ್‌ನ ಮಾಜಿ ಉದ್ಯೋಗಿಯಾಗಿದ್ದಾಳೆ.

ಕೇರಳದಲ್ಲಿ ಸಂಚಲನ ಮೂಡಿಸಿರುವ ಚಿನ್ನದ ಸ್ಮಗಲಿಂಗ್ ಕೇಸಿನ ಪ್ರಮುಖ ಆರೋಪಿ ಸ್ವಪ್ನ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯನ್ನು ಕೇರಳ ಹೈಕೋರ್ಟ್ ಮಂಗಳವಾರಕ್ಕೆ ಮುಂದೂಡಿತ್ತು. ವಿಚಾರಣೆ ವೇಳೆ ಸ್ವಪ್ನ ಸುರೇಶ್ ಗೆ ಜಾಮೀನು ನೀಡುವುದಕ್ಕೆ ರಾಷ್ಟ್ರೀಯ ತನಿಖಾ ತಂಡ (ಎನ್‌ಐಎ) ಆಕ್ಷೇಪ ವ್ಯಕ್ತಪಡಿಸಿತ್ತು.

- Advertisement -

Latest News

error: Content is protected !!