Tuesday, May 7, 2024
Homeಕ್ರೀಡೆಹಣಕಾಸಿನ ಸಂಕಷ್ಟದಿಂದಾಗಿ ಬಿಎಂಡಬ್ಲ್ಯೂ ಕಾರು ಮಾರಾಟಕ್ಕಿಟ್ಟ ಅಥ್ಲೆಟ್ ದ್ಯುತೀ ಚಂದ್

ಹಣಕಾಸಿನ ಸಂಕಷ್ಟದಿಂದಾಗಿ ಬಿಎಂಡಬ್ಲ್ಯೂ ಕಾರು ಮಾರಾಟಕ್ಕಿಟ್ಟ ಅಥ್ಲೆಟ್ ದ್ಯುತೀ ಚಂದ್

spot_img
- Advertisement -
- Advertisement -

ಜೈಪುರ: ಕೊರೊನಾವೈರಸ್ ಲಾಕ್‌ಡೌನ್‌ನಿಂದಾಗಿ ಪ್ರಾಯೋಜಕರಿಂದ ಬರುತ್ತಿದ್ದ ಆದಾಯವಿಲ್ಲದೆ ಹಣಕಾಸಿನ ತೊಂದರೆ ಅನುಭವಿಸುತ್ತಿರುವ ಭಾರತದ ಸ್ಟಾರ್ ಅಥ್ಲೀಟ್ ದ್ಯುತೀ ಚಂದ್ ತನ್ನ ಬಿಎಂಡಬ್ಲ್ಯೂ ಕಾರು ಮಾರಾಟಕ್ಕಿಟ್ಟಿದ್ದಾರೆ.

ಟೋಕಿಯೋ ಒಲಿಂಪಿಕ್ಸ್‌ಗೆ ತಯಾರಿ ನಡೆಸುತ್ತಿರುವ ದ್ಯುತಿಗೆ ಹಣಕಾಸಿ ಸಮಸ್ಯೆ ಎದುರಾಗಿದೆ. ಹಾಗಾಗಿ ತನ್ನ ಐಷಾರಾಮಿ ಬಿಎಂಡಬ್ಲ್ಯು ಚಿತ್ರಗಳನ್ನು ಹಾಕಿ, ನಿರೀಕ್ಷಿತ ಖರೀದಿದಾರರನ್ನು ಹುಡುಕುತ್ತಿರುವುದಾಗಿ ಎಂದು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

“ಈ ಸಾಂಕ್ರಾಮಿಕ ರೋಗದಿಂದಾಗಿ ಯಾವುದೇ ಪ್ರಾಯೋಜಕರು ನನ್ನ ಮೇಲೆ ಖರ್ಚು ಮಾಡಲು ಸಿದ್ಧರಿಲ್ಲ. ನನಗೆ ಹಣದ ಅವಶ್ಯಕತೆಯಿದೆ ಮತ್ತು ಟೋಕಿಯೋ ಒಲಿಂಪಿಕ್‌ಗೆ ನಾನು ತಯಾರಿ ನಡೆಸುತ್ತಿರುವಾಗ ನನ್ನ ತರಬೇತಿ ಮತ್ತು ಆಹಾರ ವೆಚ್ಚಗಳನ್ನು ಪೂರೈಸಲು ಅದನ್ನು ಮಾರಾಟ ಮಾಡಲು ನಿರ್ಧರಿಸಿದ್ದೇನೆ, ಎಂದು ದ್ಯುತಿ ಹೇಳಿದ್ದಾರೆ.

2018ರಲ್ಲಿ ಜಕಾರ್ತಾದಲ್ಲಿ ನಡೆದಿದ್ದ ಏಷ್ಯನ್ ಗೇಮ್ಸ್‌ನಲ್ಲಿ ದ್ಯುತೀ ಚಂದ್ 100 ಮೀ. ಮತ್ತು 200 ಮೀ. ಓಟದಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಆ ಕ್ರೀಡಾಕೂಟದಲ್ಲಿನ ಉತ್ತಮ ಪ್ರದರ್ಶನಕ್ಕಾಗಿ ಒಡಿಶಾ ಸರ್ಕಾರಾ ದ್ಯುತೀಗೆ ನಗದು ಪುರಸ್ಕಾರ ನೀಡಿತ್ತು. ಈ ಹಣದಲ್ಲಿ 2015 ಬಿಎಂಡಬ್ಲ್ಯೂ 3-ಸೀರೀಸ್ ಮಾದರಿಯ 30 ಲಕ್ಷ ರೂ ಮೌಲ್ಯದ ಕಾರನ್ನು ದ್ಯುತಿ ಖರೀದಿಸಿದ್ದರು.

ಇದೀಗ ತನ್ನ ತರಭೇತಿ ವೆಚ್ಚವನ್ನು ಭರಿಸಲು ದ್ಯುತಿ ತನ್ನ ಕಾರನ್ನು ಮಾರಾಟ ಮಾಡಲು ಸಿದ್ಧರಿದ್ದಾರೆ.

- Advertisement -
spot_img

Latest News

error: Content is protected !!