Thursday, June 25, 2026
Homeತಾಜಾ ಸುದ್ದಿಸುಶಾಂತ್ ಸಾವಿಗೆ ನಿಜವಾದ ಕಾರಣವೇನು ಗೊತ್ತಾ..? ಕರಾವಳಿ ಮೂಲದ ಚೆಲುವೆಯ ಸಾವು ಬಿಚ್ಚಿಡುವುದೇ ಗುಟ್ಟು..

ಸುಶಾಂತ್ ಸಾವಿಗೆ ನಿಜವಾದ ಕಾರಣವೇನು ಗೊತ್ತಾ..? ಕರಾವಳಿ ಮೂಲದ ಚೆಲುವೆಯ ಸಾವು ಬಿಚ್ಚಿಡುವುದೇ ಗುಟ್ಟು..

- Advertisement -
- Advertisement -

ಮುಂಬೈ: ಖ್ಯಾತ ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಆತ್ಮಹತ್ಯೆಗೆ ಶರಣಾಗಿದ್ದು, ಇದು ಬಾಲಿವುಡ್‌ ಚಿತ್ರರಂಗವನ್ನು ಮಾತ್ರವಲ್ಲದೇ ಅಭಿಮಾನಿಗಳಿಗೂ ಆಘಾತ ನೀಡಿದೆ.

ಚಿಕ್ಕಂದಿನಲ್ಲೇ ತಾಯಿಯನ್ನು ಕಳೆದುಕೊಂಡಿದ್ದ ಸುಶಾಂತ್ ಗೆ ಅಮ್ಮನ ಪ್ರೀತಿಯೇ ಬದುಕಿನ ದೊಡ್ಡ ಕೊರತೆಯಾಗಿತ್ತು ಎನ್ನಲಾಗಿದೆ. ಸುಶಾಂತ್ ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣದಲ್ಲಿ ಅಮ್ಮನ ಫೋಟೋ ಹಾಕಿಕೊಂಡು, ಕವನವೊಂದನ್ನು ಬರೆದಿದ್ದರು.

ಕಳೆದ ಜೂ.8ರಂದು ಕರಾವಳಿ ಮೂಲದ ದಿಶಾ ಸಾಲ್ಯಾನ್ ಅವರು ಕಟ್ಟಡದಿಂದ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಮುಂಬೈನ ಮಲಾಡ್ ನಲ್ಲಿರುವ ವಸತಿ ಸಮುಚ್ಛಯದ 14 ನೇ ಮಹಡಿಯಿಂದ ಕೆಳಗೆ ಹಾರಿದ್ದ ದಿಶಾ ಗಂಭೀರ ಗಾಯಗೊಂಡಿದ್ದರು. ಬೊರಿವಲಿಯ ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದರು.
ಸಾರ್ವಜನಿಕ ಸಂಪರ್ಕ ಮ್ಯಾಜೇಜರ್ ಆಗಿ ವೃತ್ತಿ ಜೀವನ ಆರಂಭಿಸಿದ್ದ ದಿಶಾ ಸಾಲ್ಯಾನ್ ನಂತರ ಸೆಲೆಬ್ರೆಟಿ ಟ್ಯಾಲೆಂಟ್ ಮ್ಯಾನೇಜರ್ ಆಗಿದ್ದರು. ನಟ ಸುಶಾಂತ್ ಸಿಂಗ್ ರಜಪೂತ್ ಗೆ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು.

ತಮ್ಮ ಮಾಜಿ ಮ್ಯಾನೇಜರ್‌ ದಿಶಾ ಸಾವಿಗೆ ಸಂತಾಪ ಸೂಚಿಸಿ ಟ್ವೀಟ್‌ ಮಾಡಿದ್ದ ಸುಶಾಂತ್, ಆತ್ಮಹತ್ಯೆಗೂ ಮುನ್ನಾದಿನ ಅಂದರೆ‌ ಶನಿವಾರ ತಮ್ಮ ಸ್ನೇಹಿತರೊಂದಿಗೆ ಕಾಲ ಕಳೆದಿದ್ದರೆನ್ನಲಾಗಿದೆ. ಇದಾದ ಬಳಿಕ ತಮ್ಮ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು, ಇದರ ಹಿಂದಿನ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ.

ಈ ಎಲ್ಲಾ ಘಟನೆಗಳಿಂದ ಸುಶಾಂತ್ ಸಿಂಗ್ ರಜಪೂತ್ ಮಾನಸಿಕವಾಗಿ ಕುಗ್ಗಿಹೋಗಿದ್ರಾ ಅನ್ನೋದು ಈಗಿನ ಅನುಮಾನ. ಅಲ್ಲದೇ ಬಾಂದ್ರಾದ ಪ್ಲ್ಯಾಟ್ ನಲ್ಲಿ ಸುಶಾಂತ್ ಒಬ್ಬರೇ ಇರುತ್ತಿದ್ದರು ಎನ್ನಲಾಗಿದ್ದು, ಈ ಕುರಿತು ಕೂಡ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

- Advertisement -

Latest News

error: Content is protected !!