Sunday, May 19, 2024
Homeತಾಜಾ ಸುದ್ದಿನಟ ಸುಶಾಂತ್ ಸಿಂಗ್​ ರಜಪೂತ್ ಸಾವಿನಿಂದ ಮನನೊಂದು ಬಿಹಾರದಲ್ಲಿ ಇಬ್ಬರು ಅಭಿಮಾನಿಗಳು ಆತ್ಮಹತ್ಯೆ

ನಟ ಸುಶಾಂತ್ ಸಿಂಗ್​ ರಜಪೂತ್ ಸಾವಿನಿಂದ ಮನನೊಂದು ಬಿಹಾರದಲ್ಲಿ ಇಬ್ಬರು ಅಭಿಮಾನಿಗಳು ಆತ್ಮಹತ್ಯೆ

spot_img
- Advertisement -
- Advertisement -

ಪಾಟ್ನಾ : ಭಾನುವಾರ ಸಾವನ್ನಪ್ಪಿದ ಬಾಲಿವುಡ್ ನಟ ಸುಶಾಂತ್ ಸಿಂಗ್​ ರಜಪೂತ್​ ಸಾವಿನಿಂದ ದೇಶಕ್ಕೆ ಅದರಲ್ಲೂ ಅವರ ಅಪಾರ ಅಭಿಮಾನಿಗಳಿಗೆ ಶಾಕ್‌ ನೀಡಿತ್ತು. ಇದೀಗ ಸುಶಾಂತ್ ಸಾವಿನಿಂದ ಮನನೊಂದು ಬಿಹಾರದಲ್ಲಿಂದು ಇಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಪಾಟ್ನಾದ ಕಡಂಕುವಾನ್​ ಪೊಲೀಸ್ ಠಾಣಾ ವ್ಯಾಪ್ತಿಯ ರಾಜೇಂದ್ರ ನಗರದ ತನ್ನ ಮನೆಯಲ್ಲಿನ ಯುವತಿ ಫ್ಯಾನ್​ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈಕೆ 17 ವರ್ಷದ ಮೆಟ್ರಿಕ್ಯುಲೇಷನ್​ ವಿದ್ಯಾರ್ಥಿನಿಯಾಗಿದ್ದಳು.

ಇನ್ನೊಂದು ಪ್ರಕರಣ ನಳಂದ ಜಿಲ್ಲೆಯ ಲೋಡಿಪುರ ಗ್ರಾಮದಲ್ಲಿ ನಡೆದಿದೆ. ತನ್ನ ನೆಚ್ಚಿನ ನಟದ ಸಾವಿನ ಸುದ್ದಿಯಿಂದ ಮನನೊಂದು ಯುವಕನೊರ್ವ ಸಾವಿಗೆ ಶರಣಾಗಿದ್ದಾನೆ. ಘಟನೆ ಸಂಬಂಧ ಚಾಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!