Friday, May 10, 2024
Homeತಾಜಾ ಸುದ್ದಿSSLC ಪರೀಕ್ಷೆಯ ವೇಳಾಪಟ್ಟಿಯ ಬಿಡುಗಡೆ ಮಾಡಿದ ಸಚಿವ ಸುರೇಶ್‌ ಕುಮಾರ್‌

SSLC ಪರೀಕ್ಷೆಯ ವೇಳಾಪಟ್ಟಿಯ ಬಿಡುಗಡೆ ಮಾಡಿದ ಸಚಿವ ಸುರೇಶ್‌ ಕುಮಾರ್‌

spot_img
- Advertisement -
- Advertisement -

ಧಾರವಾಡ: ಜೂ.21 ರಿಂದ ಜುಲೈ 5 ರವರೆಗೆ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಯಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ. ಒಂದು ತಿಂಗಳ ಹಿಂದೆ ತಾತ್ಕಾಲಿಕ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು. ವೇಳಾಪಟ್ಟಿಗೆ ಯಾರಿಂದಲೂ ಆಕ್ಷೇಪಣೆ ಬಂದಿಲ್ಲ. ಹೀಗಾಗಿ ಜೂನ್ 21 ರಿಂದ ಪರೀಕ್ಷೆ ನಡೆಸಲಾಗುವುದು. ಒಂದು ವಿಷಯಕ್ಕೆ ಒಂದು ದಿನ ವಿರಾಮ ಇರುವಂತೆ ವೇಳಾಪಟ್ಟಿ ನಿಗದಿಪಡಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಪರೀಕ್ಷಾ ಅಂತಿಮ ವೇಳಾಪಟ್ಟಿ ವಿವರ ಹೀಗಿದೆ

  1. ಜೂನ್ 21: ಪ್ರಥಮ ಭಾಷೆಗಳಾದ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಸಂಸ್ಕೃತ ಪರೀಕ್ಷೆ
  2. ಜೂನ್​ 24: ಗಣಿತ
  3. ಜೂನ್​ 28: ವಿಜ್ಞಾನ ಪರೀಕ್ಷೆ
  4. ಜೂ.30: ತೃತೀಯ ಭಾಷೆಗಳಾದ ಹಿಂದಿ, ಕನ್ನಡ, ಇಂಗ್ಲಿಷ್, ಅರೆಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು
  5. ಜುಲೈ 2: ದ್ವಿತೀಯ ಭಾಷೆ ಇಂಗ್ಲಿಷ್/ ಕನ್ನಡ
  6. ಜುಲೈ 5: ಸಮಾಜ ವಿಜ್ಞಾನ ಪರೀಕ್ಷೆ

- Advertisement -
spot_img

Latest News

error: Content is protected !!