Thursday, June 4, 2026
Homeಕರಾವಳಿಮಂಗಳೂರು: ನಿನ್ನೆ ಮದುವೆಯಾಗಿ ಇಂದು ಮುಂಜಾನೆ ಹೃದಯಾಘಾತದಿಂದ ಮೃತಪಟ್ಟ ಮದುಮಗಳು

ಮಂಗಳೂರು: ನಿನ್ನೆ ಮದುವೆಯಾಗಿ ಇಂದು ಮುಂಜಾನೆ ಹೃದಯಾಘಾತದಿಂದ ಮೃತಪಟ್ಟ ಮದುಮಗಳು

- Advertisement -
- Advertisement -

ಮಂಗಳೂರು: ನೂರಾರು ಕನಸುಗಳನ್ನು ಕಟ್ಟಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ದಿನವೇ ವದು ಮೃತಪಟ್ಟಿರುವ ಘಟನೆ ಮಂಗಳೂರಿನ ‌ಹೊರವಲಯದ ಕಣ್ಣೂರಿನಲ್ಲಿ ಸಂಭವಿಸಿದೆ.

ಮಂಗಳೂರಿನ ಅಡ್ಯಾರ್ ಕಣ್ಣೂರು ಸಮೀಪದ ಬೀರ್ಪುಗುಡ್ಡೆ ಜಮಾಅತ್ ಅಧ್ಯಕ್ಷ ಕೆಎಚ್‌ಕೆ ಅಬ್ದುಲ್ ಕರೀಂ ಹಾಜಿ ಎಂಬವರ ಪುತ್ರಿ ಲೈಲಾ ಆಫಿಯಾ (23) ಹೃದಯಾಘಾತದಿಂದ ನಿಧನ ಹೊಂದಿದವರು.

ಲೈಲಾ ಅಫಿಯಾರ ಮದುವೆ ಕಣ್ಣೂರಿನ ಮದುಮಗ ಮುಬಾರಕ್ ರೊಂದಿಗೆ ಭಾನುವಾರ ಅಡ್ಯಾರ್ ಕಣ್ಣೂರಿನ ಜುಮಾ ಮಸ್ಜಿದ್​ನಲ್ಲಿ ನಡೆದಿತ್ತು. ಅಡ್ಯಾರ್ ಗಾರ್ಡನ್​ನಲ್ಲಿ ಔತಣ ಕೂಟವೂ ಸಂಭ್ರಮದಿಂದ ಜರುಗಿತ್ತು.

ಔತಣಕೂಟದ ಬಳಿಕ ನವಜೋಡಿ ಮಾವನ ಮನೆಗೆ ಬಂದಿದ್ದರು. ಆ ಮನೆಯಲ್ಲಿ ರವಿವಾರ ಸಂಭ್ರಮ ತುಂಬಿ ತುಳುಕಾಡಿತ್ತು. ಮನೆಯ ಮಗಳ ಮದುವೆಯ ಸಂಭ್ರಮದ ಘಳಿಗೆಯಲ್ಲಿ ಮನೆಯವರು ಕುಣಿಕಾಡಿದ್ದರು. ಆದರೆ, ಮದುವೆ ಆದ ಮೊದಲ ರಾತ್ರಿಯೇ 3 ಗಂಟೆಯ ವೇಳೆಗೆ ಮದುಮಗಳಿಗೆ ಹೃದಯಾಘಾತವಾಗಿ ಮೃತಪಟ್ಟಿದ್ದು, ಮದುವೆ ಮನೆಯಲ್ಲಿ ಸೂತಕದ ಛಾಯೆ ಮೂಡಿಸಿದೆ.

- Advertisement -

Latest News

error: Content is protected !!