Sunday, April 28, 2024
Homeತಾಜಾ ಸುದ್ದಿಸುಪ್ರೀಂ ಕೋರ್ಟ್ ಆದೇಶ ಬಳಿಕವೂ ಚುನಾವಣಾ ಬಾಂಡ್ ಪೂರೈಕೆ!; ₹ 1 ಕೋಟಿ ಮೌಲ್ಯದ 8,350...

ಸುಪ್ರೀಂ ಕೋರ್ಟ್ ಆದೇಶ ಬಳಿಕವೂ ಚುನಾವಣಾ ಬಾಂಡ್ ಪೂರೈಕೆ!; ₹ 1 ಕೋಟಿ ಮೌಲ್ಯದ 8,350 ಚುನಾವಣಾ ಬಾಂಡ್ ಅಧಿಕಾರಿಗಳಿಗೆ..

spot_img
- Advertisement -
- Advertisement -

ನವದೆಹಲಿ: ‘ಚುನಾವಣಾ ಬಾಂಡ್’ ಯೋಜನೆಯು ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್‌ ಫೆಬ್ರುವರಿ 15ರಂದು ಆದೇಶಿಸಿತ್ತು. ಆದರೆ, ಅದಾದ ಆರು ದಿನಗಳ ನಂತರ (ಫೆಬ್ರುವರಿ 21ರಂದು) ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಇಂಡಿಯಾ ಸೆಕ್ಯುರಿಟಿ ಪ್ರೆಸ್‌ ತಲಾ ಒಂದು ಕೋಟಿ ರೂಪಾಯಿ ಮೌಲ್ಯದ 8,350 ಬಾಂಡ್‌ಗಳನ್ನು ಫೆಬ್ರುವರಿ 21ರಂದು ಅಧಿಕಾರಿಗಳಿಗೆ ಪೂರೈಸಿದೆ.

ಮಾಹಿತಿ ಹಕ್ಕು ಕಾಯ್ದೆಯ (ಆರ್‌ಟಿಐ) ಅಡಿ ಕೇಳಲಾಗಿದ್ದ ಪ್ರಶ್ನೆಗೆ ದೊರೆತ ಪ್ರತಿಕ್ರಿಯೆಯಿಂದ ಈ ವಿಚಾರ ಬಹಿರಂಗಗೊಂಡಿದೆ. 

ನೌಕಾಪಡೆಯ ನಿವೃತ್ತ ಅಧಿಕಾರಿಯೂ ಆಗಿರುವ ಆರ್‌ಟಿಐ ಕಾರ್ಯಕರ್ತ ಲೋಕೇಶ್‌ ಬಾತ್ರಾ ಕೇಳಿದ ಪ್ರಶ್ನೆಗಳಿಗೆ, ಇಂಡಿಯಾ ಸೆಕ್ಯುರಿಟಿ ಪ್ರೆಸ್‌ ಪ್ರತಿಕ್ರಿಯಿಸಿದೆ. 2018ರ ಮಾರ್ಚ್‌ 1ರಿಂದ 2024ರ ಫೆಬ್ರುವರಿ 21ರ ವರೆಗೆ ತಾನು ಮುದ್ರಿಸಿ ಸರಬರಾಜು ಮಾಡಿದ ಬಾಂಡ್‌ಗಳ ಮಾಹಿತಿ ನೀಡಿದೆ.

ಅದರಂತೆ ಫೆಬ್ರುವರಿ 21ರಂದು ₹ 1 ಕೋಟಿ ಮೌಲ್ಯದ 8,350 ಚುನಾವಣಾ ಬಾಂಡ್‌ಗಳನ್ನು ಸರಬರಾಜು ಮಾಡಿರುವುದು ಹಾಗೂ ಅದಕ್ಕಾಗಿ ₹ 1.93 ಕೋಟಿ ಜಿಎಸ್‌ಟಿ ಪಾವತಿಸಿರುವುದು ಬೆಳಕಿಗೆ ಬಂದಿದೆ.

ಚುನಾವಣಾ ಬಾಂಡ್‌ ಯೋಜನೆ ಆರಂಭವಾದಾಗಿನಿಂದ ಸರ್ಕಾರವು 6.82 ಲಕ್ಷ ಬಾಂಡ್‌ಗಳನ್ನು ಮುದ್ರಿಸಿದೆ. ಅದರಲ್ಲಿ ₹ 1 ಕೋಟಿ ಮೌಲ್ಯದ ಒಟ್ಟು 33,000 ಬಾಂಡ್‌ಗಳೂ ಸೇರಿವೆ ಎಂಬುದು ಇದರಿಂದ ತಿಳಿದುಬಂದಿದೆ.

ಫೆಬ್ರುವರಿ 21ರಂದು ಚುನಾವಣಾ ಬಾಂಡ್‌ಗಳನ್ನು ಪೂರೈಸಲು ಸರ್ಕಾರ ಅಥವಾ ಎಸ್‌ಬಿಐನಿಂದ ಆದೇಶ ಬಂದಿದೆಯೇ ಎಂದು ಕೇಳಿರುವ ಪ್ರಶ್ನೆಗೆ ನಾಸಿಕ್‌ ಪ್ರೆಸ್‌ ಈವರೆಗೆ ಪ್ರತಿಕ್ರಿಯಿಸಿಲ್ಲ ಎಂದು ಬಾತ್ರಾ ಹೇಳಿದ್ದಾರೆ.

- Advertisement -
spot_img

Latest News

error: Content is protected !!