Monday, April 29, 2024
Homeಕರಾವಳಿಕ್ಯಾಪ್ಟನ್ ಬ್ರಿಜೇಶ್ ಚೌಟ ಬಳಿ ₹ 71.81 ಲಕ್ಷ ಮೌಲ್ಯದ ಆಸ್ತಿ

ಕ್ಯಾಪ್ಟನ್ ಬ್ರಿಜೇಶ್ ಚೌಟ ಬಳಿ ₹ 71.81 ಲಕ್ಷ ಮೌಲ್ಯದ ಆಸ್ತಿ

spot_img
- Advertisement -
- Advertisement -

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ (42 ವರ್ಷ) ಅವರು ಸ್ಥಿರಾಸ್ತಿ ಹಾಗೂ ಚರಾಸ್ತಿ ಸೇರಿ ಒಟ್ಟು ₹ 71.81 ಲಕ್ಷ ಆಸ್ತಿಯನ್ನು ಹೊಂದಿದ್ದಾರೆ. ಹಾಗೂ ಅವರ ಬಳಿ ಟೊಯೋಟಾ ಇನೋವಾ ಕ್ರಿಸ್ಟ ಕಾರು ಇದ್ದು, ಅದಕ್ಕೆ ₹ 9.62 ಲಕ್ಷ ಸಾಲವನ್ನು ಹೊಂದಿದ್ದಾರೆ ಎಂದು ತಿಳಿದು ಬಂದಿದೆ.

ಅವರು ಗುರುವಾರದಂದು ನಾಮಪತ್ರದ ಜೊತೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಈ ಕುರಿತ ವಿವರಗಳಿವೆ.

ಬ್ರಿಜೇಶ್‌ ವಿರುದ್ಧ ನಂಜನಗೂಡು ಪೊಲೀಸ್‌ ಠಾಣೆಯಲ್ಲಿ 2017ರಲ್ಲಿ 1951ರ ಪ್ರಜಾಪ್ರತಿನಿಧಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಅದರ ಮರುಪರಿಶೀಲನಾ ಅರ್ಜಿಯ ವಿಚಾರಣೆ ಹೈಕೋರ್ಟ್‌ನಲ್ಲಿ ಬಾಕಿ ಇದೆ.

ಚರಾಸ್ತಿ: ಬ್ರಿಜೇಶ್ ಚೌಟ ಅವರ ಬಳಿ ಒಟ್ಟು ₹ 27.31 ಲಕ್ಷ ಚರಾಸ್ತಿ ಇದೆ. ₹ 80 ಸಾವಿರ ನಗದು ಇದೆ. ನಗರದ ಮೂರು ಬ್ಯಾಂಕ್‌ಗಳಲ್ಲಿ ಒಟ್ಟು 1,15,939 ಠೇವಣಇ ಇದೆ. ಚುನಾವಣೆ ಸಲುವಾಗಿ ಹೊಸತಾಗಿ ಆರಂಭಿಸಿರುವ ಬ್ಯಾಂಕ್‌ ಖಾತೆಯಲ್ಲಿ ₹ 1 ಲಕ್ಷ ಠೇವಣಿ ಇದೆ. ಮೆ.ಆಲಿವ್‌ ಸ್ಟೀಲ್‌ ಸಲ್ಯೂಷನ್ಸ್‌ ಸಂಸ್ಥೆಯಲ್ಲಿ ₹ 7.20 ಲಕ್ಷ ಹೂಡಿಕೆ ಮಾಡಿದ್ದಾರೆ. ಅವರ ಟೊಯೋಟಾ ಇನೋವಾ ಕ್ರಿಸ್ಟ ಕಾರಿನ ಮೌಲ್ಯ ₹ 8.15 ಲಕ್ಷ. ಅವರ ಬಳಿ 137 ಗ್ರಾಂ ಚಿನ್ನಾಭರಣಗಳಿದ್ದು, ಅವುಗಳ ಮೌಲ್ಯ ಅಂದಾಜು ₹ 9 ಲಕ್ಷ.

ಸ್ಥಿರಾಸ್ತಿ: ಬ್ರಿಜೇಶ್ ಚೌಟ ಅವರು ತಲಪಾಡಿ ಬಳಿ ಹಿರಿಯರಿಂದ ಬಳುವಳಿಯಾಗಿ ಪಡೆದಿರುವ ಐದು ನಿವೇಶನಗಳಲ್ಲಿ (18 ಸೆಂಟ್ಸ್‌, 32 ಸೆಂಟ್ಸ್‌, 35 ಸೆಂಟ್ಸ್‌, 45 ಸೆಂಟ್ಸ್‌, 12 ಸೆಂಟ್ಸ್‌ ವಿಸ್ತೀರ್ಣದ್ದು) ಶೇ 25ರಷ್ಟು ಪಾಲನ್ನು ಹೊಂದಿದ್ದಾರೆ. ಈ ನಿವೇಶನಗಳ ಒಟ್ಟು ಮೌಲ್ಯ ₹ 1.74 ಕೋಟಿ ಇದ್ದು, ಅದರಲ್ಲಿ ಬ್ರಿಜೇಶ್ ಚೌಟ ಅವರ ಪಾಲಿನ ಆಸ್ತಿ ಮೌಲ್ಯ ಅಂದಾಜು ₹43.5 ಲಕ್ಷ.

ಚೌಟ ಅವರು ತಮ್ಮ ಹೆಸರಿನಲ್ಲಿ ವೆಬ್‌ಸೈಟ್ (https://captainbrijesh.in), ಎಕ್ಸ್‌ (ಟ್ವಿಟರ್‌) ಖಾತೆ (https://x.com/captbrijesh),ಇನ್ಸ್ಟಾಗ್ರಾಂ (https://www.instagram.com/captbrijeshchowta/), ಫೇಸ್‌ಬುಕ್‌ (https://www.facebook.com/captbrijeshchowta/) ಹಾಗೂ ಯೂಟ್ಯೂಬ್‌ (@CaptainBrijeshChowta) ಖಾತೆಗಳನ್ನು ಹೊಂದಿದ್ದಾರೆ.

ಸರ್ಕಾರಕ್ಕೆ ಯಾವುದೇ ಬಾಕಿ ಉಳಿಸಿಕೊಂಡಿಲ್ಲ. ಇನ್ನೂ ಮದುವೆಯಾಗಿಲ್ಲ. ಅವಲಂಬಿತರು ಯಾರೂ ಇಲ್ಲ. 2022–23ನೇ ನೇ ಸಾಲಿನಲ್ಲಿ ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಿದ ವಿವರದಲ್ಲಿ ಅವರು ತಮಗೆ ವಾರ್ಷಿಕ ₹6,51,590 ಆದಾಯವಿದೆ. ಆದಾಯದ ಮೂಲ ಉದ್ದಿಮೆ ಎಂದು ಹೇಳಿಕೊಂಡಿದ್ದಾರೆ.

- Advertisement -
spot_img

Latest News

error: Content is protected !!