Friday, June 5, 2026
Homeತಾಜಾ ಸುದ್ದಿಪ್ರಮೋದ್ ಮುತಾಲಿಕ್ ಗೆ ಮತ್ತೊಂದು ಸಂಕಷ್ಟ; ಸಮನ್ಸ್ ನೀಡಿದ ನ್ಯಾಯಾಲಯ

ಪ್ರಮೋದ್ ಮುತಾಲಿಕ್ ಗೆ ಮತ್ತೊಂದು ಸಂಕಷ್ಟ; ಸಮನ್ಸ್ ನೀಡಿದ ನ್ಯಾಯಾಲಯ

- Advertisement -
- Advertisement -

ಬೆಂಗಳೂರು; ಸದಾ ಒಂದಿಲ್ಲೊಂದು ವಿವಾದದಿಂದಲೇ ಸುದ್ದಿಯಾಗುತ್ತಿರುವ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಮುತಾಲಿಕ್ ಅವರಿಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಸಮನ್ಸ್ ಜಾರಿ ಮಾಡಿದೆ.

2017ರಲ್ಲಿ ಯಾದಗಿರಿಯಲ್ಲಿ ನಡೆದಿದ್ದ ಹಿಂದೂ ಸಮಾವೇಶದಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ತೆಲಂಗಾಣ ಶಾಸಕ ರಾಜಾ ಸಿಂಗ್ ಅವರಿಗೆ ಖಡ್ಗ ನೀಡಿ ಸತ್ಕರಿಸಿದ್ದರು. ಈ ಬಗ್ಗೆ ಯಾದಗಿರಿಯಲ್ಲಿ ದೂರು ದಾಖಲಾಗಿತ್ತು. ಆ ಬಳಿಕ ಯಾದಗಿರಿ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಕೂಡ ನಡೆದಿತ್ತು

ಈ ಬಳಿಕ ಯಾದಗಿರಿ ಜಿಲ್ಲಾ ನ್ಯಾಯಾಲಯದಿಂದ ಪ್ರಕರಣ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಗೆ ವರ್ಗಾವಣೆಗೊಂಡಿತ್ತು. ಇಂದು ಈ ಸಂಬಂಧ ವಿಚಾರಣೆ ನಡೆಸಿದಂತ ನ್ಯಾಯಲಯವು, ಜೂನ್ 9ರಂದು ವಿಚಾರಣೆಗೆ ಹಾಜರಾಗುವಂತೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ತೆಲಂಗಾಣ ಶಾಸಕ ರಾಜಾ ಸಿಂಗ್ ಸೇರಿದಂತೆ ನಾಲ್ವರಿಗೆ ಸಮನ್ಸ್ ಜಾರಿ ಮಾಡಿದೆ.

- Advertisement -

Latest News

error: Content is protected !!