Tuesday, April 30, 2024
Homeತಾಜಾ ಸುದ್ದಿ40 ವರ್ಷಗಳಿಂದ ಈ ವ್ಯಕ್ತಿಗೆ ಮರಳೇ ಆಹಾರ: ಹೊಯಿಗೆ ತಿಂದರೂ ಈತನಿಗಿಲ್ಲ ಅನಾರೋಗ್ಯ

40 ವರ್ಷಗಳಿಂದ ಈ ವ್ಯಕ್ತಿಗೆ ಮರಳೇ ಆಹಾರ: ಹೊಯಿಗೆ ತಿಂದರೂ ಈತನಿಗಿಲ್ಲ ಅನಾರೋಗ್ಯ

spot_img
- Advertisement -
- Advertisement -

ಉತ್ತರಪ್ರದೇಶ : ಅಯ್ಯೋ ನನ್ಗೆ ಆ ಆಹಾರ ಆಗಲ್ಲ, ಈ ಆಹಾರ ಆಗಲ್ಲಪ್ಪಾ ಅನ್ನೋರು ಸಾಕಷ್ಟು ಮಂದಿ. ಆದ್ರೆ ಉತ್ತರಪ್ರದೇಶದಲ್ಲಿ ವ್ಯಕ್ತಿಯೋರ್ವನಿಗೆ ನಾವೆಲ್ಲಾ ಕಟ್ಟಡ ನಿರ್ಮಿಸೋಕೆ ಬಳಸುವ ಮರಳೇ ಆಹಾರ ಅಂದ್ರೆ ನಂಬ್ತೀರಾ. ನಂಬೋಕೆ ಕಷ್ಟ ಅನ್ಸಿದ್ರೂ ಇದು ಅಪ್ಪಟ ಸತ್ಯ.

ಇಲ್ಲಿನ ಗಂಜಾಮ್ ಜಿಲ್ಲೆಯ ಅರಂಗಾಪುರದ ನಿವಾಸಿ ಹರಿಲಾಲ್ ಎಂಬಾತ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾರೆ. ಬರೋಬ್ಬರಿ ನಲವತ್ತು ವರ್ಷಗಳಿಂದ ಮರಳನ್ನೇ ಆಹಾರವಾಗಿ ಸೇವಿಸುತ್ತಿದ್ದಾರೆ. ಬಾಲ್ಯದಿಂದಲೂ ಮರಳು ತಿನ್ನುವ ಹವ್ಯಾಸವೊಂದಿದ್ದ ಹರಿಲಾಲ್‌, ತನ್ನ ಗ್ರಾಮಕ್ಕೆ ಹತ್ತಿರವಿರುವ ನದಿಯಿಂದ ಮರಳನ್ನು ಸಂಗ್ರಹಿಸಿಟ್ಟಿದ್ದಾರೆ.

ಒಂದು ಕಾಲದಲ್ಲಿ ಸಾಕಷ್ಟು ಮರಳು ತಿನ್ನುತ್ತಿದ್ದೆ, ಈಗ ಸ್ವಲ್ಪ ಕಡಿಮೆ ಮಾಡಿದ್ದೇನೆ. ಇದುವರೆಗೂ ನನಗೆ ಯಾವುದೇ ಖಾಯಿಲೆ ಬಂದಿಲ್ಲ. ಕುಟುಂಬಸ್ಥರು, ಗ್ರಾಮಸ್ಥರು ಮತ್ತು ಕಾರ್ಮಿಕರು ಮರಳು ತಿನ್ನದಂತೆ ಪದೇ ಪದೇ ಹೇಳಿದರೂ ನಾನು ಈ ಹವ್ಯಾಸ ಬಿಟ್ಟಿಲ್ಲ ಎಂದು ಹರಿಲಾಲ್ ಹೇಳಿದ್ದಾರೆ.

- Advertisement -
spot_img

Latest News

error: Content is protected !!