Friday, April 26, 2024
Homeಕರಾವಳಿಸುಳ್ಯ: ಕೊರಗಜ್ಜನ ನೇಮದ ಸಮಯದಲ್ಲೊಂದು ಪವಾಡ- 12 ದೈವ ಕಟ್ಟಿದ್ದರೂ ಕಾಣಿಸಿಕೊಂಡಿತು 13 ಕೊರಗಜ್ಜ ದೈವ

ಸುಳ್ಯ: ಕೊರಗಜ್ಜನ ನೇಮದ ಸಮಯದಲ್ಲೊಂದು ಪವಾಡ- 12 ದೈವ ಕಟ್ಟಿದ್ದರೂ ಕಾಣಿಸಿಕೊಂಡಿತು 13 ಕೊರಗಜ್ಜ ದೈವ

spot_img
- Advertisement -
- Advertisement -

ಸುಳ್ಯ: ಶಿವಾಂಶ ಸಂಭೂತ ಕೊರಗಜ್ಜ, ಕರಾವಳಿಗರ ಇಷ್ಟ ದೈವ. ಏನೇ ಕಷ್ಟ ಬರಲಿ, ಮನೆಯ ಸ್ವತ್ತು ಕಳ್ಳತನವಾಗಲಿ, ಮಕ್ಕಳಿಗೆ ಕಾಯಿಲೆ ಬಾಧಿಸಲಿ ಕೊರಗಜ್ಜನಿಗೊಂದು ವೀಳ್ಯದೆಲೆಯ ಹರಕೆ ಹೊತ್ತರೆ ಸಾಕು, ಕ್ಷಣಮಾತ್ರದಲ್ಲಿ ಸಮಸ್ಯೆ ಬಗೆಹರಿಯುತ್ತೆ ಅನ್ನೋದು ನಂಬಿಕೆ ಭಕ್ತರಲ್ಲಿದೆ. ಅದ್ರೆ ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗೂನಡ್ಕದಲ್ಲಿ ಸ್ವಾಮಿ ಕೊರಗಜ್ಜನ ಪವಾಡವೊಂದು ನಡೆದಿದ್ದು ಇದು ಅಚ್ಚರಿಗೆ ಕಾರಣವಾಗಿದೆ.

ಹೌದು, ಸುಳ್ಯ ತಾಲೂಕಿನ ಗೂನಡ್ಕದ ಶ್ರೀ ಆದಿಬ್ರಹ್ಮ ಮೊಗೇರ್ಕಳ ದೈವಸ್ಥಾನದಲ್ಲಿ ಆದಿಬ್ರಹ್ಮ ಮೊಗೇರ್ಕಳ 40 ನೇ ವರ್ಷದ ನೇಮೋತ್ಸವ ಮತ್ತು ಮಂತ್ರಮೂರ್ತಿ ಗುಳಿಗ ದೈವದ ಕೋಲ ನಡೆಯಿತು. ಮರುದಿನ ಬೆಳಿಗ್ಗೆ ಕೊರಗಜ್ಜನ ನೇಮೋತ್ಸವ ನಡೆಯಿತು. ಅದರೆ ಈ ಬಾರಿ 12 ಕೊರಗಜ್ಜ ದೈವದ ಕೋಲ ನಡೆಸಲು ಆಡಳಿತ ಸಮಿತಿ ನಿರ್ಧಾರ ಮಾಡಿತ್ತು, ಅದರಂತೆ 11 ಹರಿಕೆ ಮತ್ತು 1 ಮಾಮುಲಿ ಕೋಲ ನಡೆಸಲು ಎಲ್ಲಾ ಸಿದ್ದತೆ ನಡೆಸಿದ್ದರು 12 ದೈವಗಳಿಗೆ ಬೇಕಾಗುವ ಗಂಟೆ ಹಾಗೂ ಇನ್ನಿತರ ಪರಿಕರ ಸಿದ್ದ ಪಡಿಸಿದ್ದರು. ಹಾಗೇನೆ 12 ಅಗೇಲಿಗೆ ತಯಾರಿ ಮಾಡಿ 12 ದೈವದ ತಲೆಗೆ ಇಡುವ ಮಡಪ್ಪಾಳೆ ಹಾಗೂ ಇತರ ವಸ್ತುಗಳನ್ನು ಜೋಡನೆ ಮಾಡಲಾಗಿತ್ತು. ಹೀಗೆ 12 ಜನ ದೈವ ಕಟ್ಟಿದ್ದರೂ ನೇಮೋತ್ಸವ ಹೊರಟು ದೈವಗಳ ನರ್ತನ ಪ್ರಾರಂಭವಾಯಿತು.

ಸ್ವಲ್ಪ ಹೊತ್ತಲ್ಲಿ 12 ಕೊರಗಜ್ಜ ದೈವಗಳ ಬದಲು ಕೆಲವರಿಗೆ 13 ಕಾಣಿಸಿಕೊಂಡವು. ಈ ದೈವದ ತಲೆಗೆ ಮಡಪ್ಪಾಳೆ (ಗೋಂಪಾರು) ಇರಲಿಲ್ಲ. ಮಡಪ್ಪಾಳೆಯನ್ನು ದೈವ ಕೇಳಿತು. ಮತ್ತೆ ಮಡಪ್ಪಾಳೆ ತಯಾರಿ ಮಾಡಿ ಕೊಡಲಾಯಿತು. ಹೀಗೆ ಮಡಪ್ಪಾಳೆ ತಯಾರಿ ಮಾಡಿ ಕೊಟ್ಟ ನಂತರ ಆ ಕೊರಗಜ್ಜ ಕುಣಿದಿದೆ. ಕೊನೆಗೆ ಅಗೆಲು ಬಳಸುವ ಸಂದರ್ಭದಲ್ಲಿ 13 ದೈವಗಳ ಬದಲು 12 ದೈವಗಳು ಮಾತ್ರ ಉಳಿದು ಆ ದೈವ ಕಾಣದಂತೆ ಮಾಯವಾಗಿದೆನ್ನಲಾಗಿದೆ. ಆದರೆ ದೈವ ನಡೆಯತ್ತಿದ್ದ ಸಂದರ್ಭದಲ್ಲಿ ಅಲ್ಲಿದ್ದ ಹಲವು ಮಂದಿಗೆ 13 ದೈವಗಳು ಗೋಚರಿಸಿದೆ.

ಆದರೆ ಆಡಳಿತ ಮಂಡಳಿಯವರಿಗೆ ಇದರ ಅರಿವಾಗಿರಲಿಲ್ಲ, ಅಲ್ಲಿದ್ದವರ ಮೊಬೈಲ್ ಫೋನ್ ಗಳಲ್ಲಿ ವೀಡಿಯೋ ಸಂಗ್ರಹಿಸಿದ ನಂತರ ಅಲ್ಲಿಯೂ 13 ದೈವಗಳು ಕಾಣ ತೊಡಗಿತು, ಇದೀಗ ದೈವ ನರ್ತನ ವೇಳೆ 13 ಹೇಗಾಯಿತು ಎನ್ನುವುದೇ ಸ್ಥಳೀಯರ ಕುತೂಹಲ. ಹಾಗೆಯೆ ಕ್ಷೇತ್ರದ ಭಕ್ತರಲ್ಲಿ ಇನ್ನಷ್ಟು ಭಯ ಭಕ್ತಿಯನ್ನು ಹೆಚ್ಚಿಸಿವೆ.

ದೈವದ ಪವಾಡದಿಂದ ಭಯ ಭಕ್ತಿಯಿಂದ ದೈವಸ್ಥಾನದ ಸಮಿತಿಯವರು ಜ್ಯೋತಿಷ್ಯರ ಮೊರೆ ಹೋಗಿದ್ದು ಪ್ರಶ್ನೆ ಚಿಂತನೆ ನಡೆಸಿದ್ದಾಗ ಸಾನಿಧ್ಯದಲ್ಲಿ ವಿಚಿತ್ರ ಪವಾಡಗಳ ಸ್ಥಿತಿ ಕಂಡು ಬರುತ್ತಿದ್ದು ಸ್ಥಳದಲ್ಲಿಯೇ ಸೂಕ್ಷ್ಮ ಪ್ರಶ್ನೆ ಚಿಂತನೆ ನಡೆಸುವುದಾಗಿ ಸೂಚಿಸಿದ್ದಾರೆ. ಈ ಕಾರಣದಿಂದ ಕಮಿಟಿಯವರು ಪ್ರಶ್ನೆ ಚಿಂತನೆಗೆ ದಿನ ನಿಗದಿಗೊಳಿಸಿದ್ದಾರೆ.

- Advertisement -
spot_img

Latest News

error: Content is protected !!