Monday, April 29, 2024
Homeಕರಾವಳಿಸುಳ್ಯ: ರಂಜಾನ್ ಹಬ್ಬದ ವೇಳೆ ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿರುವ ಬಟ್ಟೆ ಅಂಗಡಿಗಳು

ಸುಳ್ಯ: ರಂಜಾನ್ ಹಬ್ಬದ ವೇಳೆ ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿರುವ ಬಟ್ಟೆ ಅಂಗಡಿಗಳು

spot_img
- Advertisement -
- Advertisement -

ಸುಳ್ಯ: ಕೊರೋನ ವೈರಸ್ ಹಿನ್ನೆಲೆಯಲ್ಲಿ ಜಾಗೃತಿ ಗೊಂಡಿರುವ ಮುಸಲ್ಮಾನ ಬಾಂಧವರು ಈ ಬಾರಿಯ ರಂಜಾನ್ ಹಬ್ಬವನ್ನು ಸರಳವಾಗಿ ಆಚರಿಸಿ ಕೊಳ್ಳುವ ಉದ್ದೇಶದಿಂದ ಯಾವುದೇ ರೀತಿಯ ಹೊಸ ಉಡುಪುಗಳನ್ನು ಧರಿಸದೆ ಸರಳತೆಯಿಂದ ಆಚರಿಸಲು ನಿರ್ಧರಿಸಿದಂತಿದೆ. ಇದೇ ಕಾರಣದಿಂದ ಸುಳ್ಯದ ಹಾಗೂ ತಾಲೂಕಿನ ವಿವಿಧ ಕಡೆಗಳಲ್ಲಿ ಬಟ್ಟೆ ಹಾಗೂ ಫೂಟ್ ವೇರ್ ಅಂಗಡಿಗಳಲ್ಲಿ ಮುಸಲ್ಮಾನ ಗ್ರಾಹಕರುಗಳಿಲ್ಲದೆ ವ್ಯಾಪಾರ ವಹಿವಾಟುಗಳು ಮಂಕಾಗಿರುವಂತೆ ಕಂಡುಬರುತ್ತಿದೆ.

ರಂಜಾನ್ ತಿಂಗಳ ಪ್ರಾರಂಭದಿಂದಲೇ ಲಾಕ್ಡೌನ್ ಆದ ಕಾರಣದಿಂದ ಸುಳ್ಯ ಗಾಂಧಿನಗರ ಹಾಗೂ ಕೆಳಗಿನಪೇಟೆ ಕೆಲವು ಕಡೆಗಳಲ್ಲಿ ಭರ್ಜರಿ ಸಮೋಸಗಳ ವ್ಯಾಪಾರಗಳು ಈ ಬಾರಿ ಕಂಡುಬರಲಿಲ್ಲ. ರಂಜಾನ್ ವೃತಾಚರಣೆ ಯಲ್ಲಿ ಸಮೋಸ ಮುಖ್ಯ ಖಾದ್ಯವಾಗಿ ಬಳಸಿಕೊಳ್ಳಲಾಗುತ್ತಿತ್ತು. ಆದರೆ ಈ ಬಾರಿಯ ರಂಜಾನ್ ಆಚರಣೆ ಮಸೀದಿಗಳಲ್ಲಿ ನಮಾಝ್ ಗಳು ಪ್ರಾರ್ಥನೆಗಳು ಇಲ್ಲದೆ ಮೌನವಾಗಿ ಕಳೆದದ್ದು ಮುಸಲ್ಮಾನ ಬಾಂಧವರಲ್ಲಿ ನೋವುಂಟು ಮಾಡಿದೆ ಎಂದು ಸುಳ್ಯದ ನಾಗರಿಕರೊಬ್ಬರು ನಿಮ್ಮ ‘ಮಹಾ ಎಕ್ಸ್​ಪ್ರೆಸ್’ಗೆ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!