Thursday, June 4, 2026
Homeಕರಾವಳಿಅಜ್ಜಾವರ: ಪ್ರಾಕೃತಿಕ ವಿಕೋಪದಿಂದ ಮನೆ ಕಳೆದುಕೊಂಡಿದ್ದವರಿಗೆ ಶಾಸಕ ಎಸ್ ಅಂಗಾರರಿಂದ ಮನೆ ಹಸ್ತಾಂತರ

ಅಜ್ಜಾವರ: ಪ್ರಾಕೃತಿಕ ವಿಕೋಪದಿಂದ ಮನೆ ಕಳೆದುಕೊಂಡಿದ್ದವರಿಗೆ ಶಾಸಕ ಎಸ್ ಅಂಗಾರರಿಂದ ಮನೆ ಹಸ್ತಾಂತರ

- Advertisement -
- Advertisement -

ಸುಳ್ಯ: ತಾಲೂಕಿನ ಅಜ್ಜಾವರ ಗ್ರಾಮದ ಕಲ್ಲಗುಡ್ಡೆ ಪುರುಷಮ್ಮ ಎಂಬವರ ಮನೆಯು ಪ್ರಾಕೃತಿಕ ವಿಕೋಪದಿಂದ ಬಿದ್ದುಹೋದ ಸಂದರ್ಭದಲ್ಲಿ, ಮಾನ್ಯ ಶಾಸಕ ಎಸ್ ಅಂಗಾರರ ನೇತೃತ್ವದಲ್ಲಿ ಸ್ಥಳೀಯ ಪ್ರಮುಖರ ಹಾಗೂ ಅಧಿಕಾರಿಗಳ ಮುತುವರ್ಜಿಯಿಂದ, ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಸನ್ಮಾನ್ಯ ಬಿ ಎಸ್ ಯಡಿಯೂರಪ್ಪನವರ ರೂ.5.00 ಲಕ್ಷ ಅನುದಾನ ಬಿಡುಗಡೆ ಯಾಗಿತ್ತು.

ಆ ಮನೆಯನ್ನು ಇಂದು ಮಾನ್ಯ ಶಾಸಕರು ಫಲಾನುಭವಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮಾನ್ಯ ಶಾಸಕ ಎಸ್ ಅಂಗಾರರನ್ನು ಹಾಗೂ ಸುಂದರವಾಗಿ ಮನೆ ನಿರ್ಮಿಸಿಕೊಟ್ಟ ಊರವರಾದ ಕಿಟ್ಟಣ್ಣ ರೈ ಇರಂತಮಜಲು ಇವರನ್ನು ಗೌರವಿಸಲಾಯಿತು.

ಸುಬೋಧ್ ಶೆಟ್ಟಿ, ನಯನಕುಮಾರ್ ರೈ, ಕಮಲಾಕ್ಷ ರೈ, ಪ್ರಬೋದ್ ಶೆಟ್ಟಿ, ಸುಕುಮಾರ ಕೆ., ಬಾಲಕೃಷ್ಣ ಕೆ. ಹಾಗೂ ಗ್ರಾಮ ಲೆಕ್ಕಾಧಿಕಾರಿ ಶರತ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.

- Advertisement -

Latest News

error: Content is protected !!