Sunday, June 7, 2026
Homeಚಿಕ್ಕಮಗಳೂರುಚಿಕ್ಕಮಗಳೂರು :ಕಾರು ಸಮೇತ ನೀರಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಒಂದೇ ಕುಟುಂಬದವರು; ಇಬ್ಬರ ಸಾವು!

ಚಿಕ್ಕಮಗಳೂರು :ಕಾರು ಸಮೇತ ನೀರಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಒಂದೇ ಕುಟುಂಬದವರು; ಇಬ್ಬರ ಸಾವು!

- Advertisement -
- Advertisement -


ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಎಂ.ಸಿ.ಹಳ್ಳಿಯಲ್ಲಿ ಒಂದೇ ಕುಟುಂಬದ ನಾಲ್ವರು ಸದಸ್ಯರು ಕಾರು ಸಮೇತ ನೀರಿಗೆ ಹಾರಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.

ವಾಟ್ಸಪ್ ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಾಯ್ಸ್ ಮೆಸೇಜ್ ಹಾಕಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ್ದು, ಇವರಲ್ಲಿ ಮಂಜು ಹಾಗೂ ಸುನಂದಮ್ಮ ಎಂಬುವರು ಕಾರಿನ ಸಮೇತ ನೀರುಪಾಲಾಗಿದ್ದಾರೆ. ಇನ್ನು ಮಂಜು ಪತ್ನಿ ನೀತು ಹಾಗೂ ಮಗ ಧ್ಯಾನ್ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ

ಇವರೆಲ್ಲರೂ ಭದ್ರಾವತಿ ತಾಲೂಕಿನ ಜೆ.ಡಿ.ಕಟ್ಟೆಯ ನಿವಾಸಿಗಳಾಗಿದ್ದು, ಸ್ಥಳಕ್ಕೆ ತರೀಕೆರೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!