Saturday, May 4, 2024
Homeಕರಾವಳಿಮಂಗಳೂರು:ಕುಲಶೇಖರ - ಪಡೀಲ್ ನಡುವಣ ರೈಲ್ವೆ ಹಳಿಯಲ್ಲಿ ಬಿರುಕು;ತಡವಾಗಿ ಸಂಚರಿಸಿದ ರೈಲುಗಳು

ಮಂಗಳೂರು:ಕುಲಶೇಖರ – ಪಡೀಲ್ ನಡುವಣ ರೈಲ್ವೆ ಹಳಿಯಲ್ಲಿ ಬಿರುಕು;ತಡವಾಗಿ ಸಂಚರಿಸಿದ ರೈಲುಗಳು

spot_img
- Advertisement -
- Advertisement -

ಮಂಗಳೂರು: ಕುಲಶೇಖರ ಮತ್ತು ಪಡೀಲ್ ನಡುವಿನ ರೈಲ್ವೆ ಹಳಿಗಳಲ್ಲಿ ಬಿರುಕು ಕಾಣಿಸಿಕೊಂಡ ಪರಿಣಾಮ, ಕೆಲವು ರೈಲು ಸಂಚಾರ ರದ್ದುಗೊಂಡಿದ್ದು, ಇತರ ಆರು ರೈಲುಗಳು ವಿಳಂಬವಾಗಿ ಸಂಚರಿಸಿವೆ.

ತೋಕೂರು – ಮಂಗಳೂರು ವಿಭಾಗದ ಕುಲಶೇಖರ ಮತ್ತು ಪಡೀಲ್ ನಡುವಣ ರೈಲು ಹಳಿಯಲ್ಲಿ ಕೆಲವು ಕ್ಲಿಪ್ ಗಳು ತುಂಡಾಗಿ ಅಪಾಯದ ಸಿಗ್ನಲ್ ತೋರಿಸುತ್ತಿತ್ತು,ಇದನ್ನು ಗಮನಿಸಿದ ಟ್ರ್ಯಾಕ್ ನಿರ್ವಾಹಕ ಚಂದನ್ ಕುಮಾರ್ ಮಂಗಳವಾರ ತಡರಾತ್ರಿ 1.10 ಗಂಟೆ ಸುಮಾರಿಗೆ ಉನ್ನತ ಅಧಿಕಾರಿಗಳ ಗಮನಕ್ಕೆ ತಂದಿದ್ದರು.



ಈ ಸಂದರ್ಭ ಕೇರಳ ಕಡೆಗೆ ಸಂಚರಿಸುತ್ತಿದ್ದ ಯೋಗ ನಗರಿ ಹೃಷಿಕೇಶ್ – ಕೊಚುವೇಲಿ ರೈಲನ್ನು ತಡೆಹಿಡಿಯಲಾಯಿತು. ಬೆಳಿಗ್ಗೆ 6.13 ಕ್ಕೆ ದುರಸ್ತಿ ಪೂರ್ಣಗೊಂಡ ನಂತರ, ರೈಲು ಬೆಳಿಗ್ಗೆ 7 ಗಂಟೆಗೆ ಮಂಗಳೂರು ಜಂಕ್ಷನ್‌ಗೆ ತಲುಪಿ ತನ್ನ ಪ್ರಯಾಣವನ್ನು ಮುಂದುವರಿಸಿತು. ರೈಲು ಆರು ಗಂಟೆಗೂ ಹೆಚ್ಚು ವಿಳಂಬವಾಗಿತ್ತು.ಇದಲ್ಲದೆ ತಿರುವನಂತಪುರಂ ನಿಜಾಮುದ್ದೀನ್ ರಾಜಧಾನಿ ಎಕ್ಸ್‌ಪ್ರೆಸ್, ಬೆಂಗಳೂರು – ಕಾರವಾರ ಎಕ್ಸ್‌ಪ್ರೆಸ್ ಮುಂತಾದ ಆರು ರೈಲು ತಡವಾಗಿ ಸಂಚರಿಸಿದೆ. ಮಂಗಳೂರು ಸೆಂಟ್ರಲ್ – ಮಡಂಗಾವ್ ಇಂಟರ್ ಸಿಟಿ ವಿಶೇಷ ರೈಲಿನ ಯಾನವನ್ನು ರದ್ದುಪಡಿಸಲಾಯಿತು. ರೈಲಿನಲ್ಲಿದ್ದ ಪ್ರಯಾಣಿಕರಿಗೆ ಆಹಾರ ಹಾಗೂ ನೀರಿನ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗಿತ್ತು.

- Advertisement -
spot_img

Latest News

error: Content is protected !!