Friday, May 3, 2024
Homeತಾಜಾ ಸುದ್ದಿಟಾಲಿವುಡ್ ಡ್ರಗ್ಸ್ ಪ್ರಕರಣ: ರಾಣಾ ದಗ್ಗುಬಾಟಿ,ರಾಕುಲ್ ಪ್ರೀತ್ ಸೇರಿ 12 ಮಂದಿಗೆ ಇ.ಡಿ ಸಮನ್ಸ್!

ಟಾಲಿವುಡ್ ಡ್ರಗ್ಸ್ ಪ್ರಕರಣ: ರಾಣಾ ದಗ್ಗುಬಾಟಿ,ರಾಕುಲ್ ಪ್ರೀತ್ ಸೇರಿ 12 ಮಂದಿಗೆ ಇ.ಡಿ ಸಮನ್ಸ್!

spot_img
- Advertisement -
- Advertisement -

ಹೈದರಾಬಾದ್: ನಾಲ್ಕು ವರ್ಷಗಳ ಹಿಂದಿನ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ಚಿತ್ರರಂಗದ 12 ಮಂದಿ ನಟ, ನಟಿಯರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿಮಾಡಿರುವುದಾಗಿ ವರದಿಯಾಗಿದೆ.

ಟಾಪ್ ನಟಿ ರಕುಲ್ ಪ್ರೀತ್ ಸಿಂಗ್ ಹಾಗೂ ಬಾಹುಬಲಿ ಖ್ಯಾತಿಯ ನಟ ರಾಣಾ ದಗ್ಗುಬಾಟಿ ಸೇರಿದಂತೆ ಒಟ್ಟು 10 ಜನರಿಗೆ ನೋಟಿಸ್ ಕಳುಹಿಸಲಾಗಿದೆ. 4 ವರ್ಷ ಹಳೆಯ ಪ್ರಕರಣದಲ್ಲಿ ಇವರನ್ನು ಶೀಘ್ರವೇ ವಿಚಾರಣೆ ಮಾಡಲಾಗುತ್ತದೆ ಎಂಬ ಸುದ್ದಿ ಕೇಳಿ ಬಂದಿದೆ. ಜಾರಿ ನಿರ್ದೇಶನಾಲಯ ರಾಕುಲ್ ಪ್ರೀತ್ ಸಿಂಗ್‌ ಅವರನ್ನು ಸೆ.6ರಂದು, ಬಾಹುಬಲಿ ನಟ ರಾಣಾ ಅವರನ್ನು ಸೆ.8ರಂದು ತೆಲುಗು ನಟ ರವಿ ತೇಜ ಅವರನ್ನು ಸೆ.9 ಹಾಗೂ ನಿರ್ದೇಶಕ ಪುರಿ ಜಗನ್ನಾಥ ಅವರನ್ನು ಸೆ.31 ರಂದು ವಿಚಾರಣೆ ನಡೆಸಲಿದೆ ಎಂದು ಹೇಳಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಒಟ್ಟು 30 ಜನರನ್ನು ಬಂಧಿಸಲಾಗಿದ್ದು, 62 ಜನರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಆ ಪೈಕಿ 11 ಮಂದಿಗೆ ಸಿನಿಮಾ ಸೆಲೆಬ್ರಿಟಿಗಳ ಜೊತೆ ಸಂಪರ್ಕ ಇರುವುದು ತಿಳಿದುಬಂದಿದೆ.

2017ರಲ್ಲಿ ತೆಲಂಗಾಣ ಅಬಕಾರಿ ಇಲಾಖೆ ನಡೆಸಿದ ದಾಳಿಯಲ್ಲಿ 30 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದು, ಈ ಪ್ರಕರಣದಲ್ಲಿ 12 ಜನರ ವಿರುದ್ಧ ದೂರು ದಾಖಲು ಮಾಡಿಕೊಳ್ಳಲಾಗಿತ್ತು. ಅಕ್ರಮ ಹಣ ವರ್ಗಾವಣೆಗೆ ಸಂಬಂಧಪಟ್ಟಂತೆ ಈಗ ಈ ಸೆಲೆಬ್ರಿಟಿಗಳನ್ನು ವಿಚಾರಣೆಗೆ ಕರೆಯಲಾಗಿದೆ. ‘ಇವರೆಲ್ಲರನ್ನು ಆರೋಪಿಗಳು ಎಂದು ಹೇಳಲಾಗಿಲ್ಲ. ಅಕ್ರಮ ಹಣ ವರ್ಗಾವಣೆಯಲ್ಲಿ ಈ ಸೆಲೆಬ್ರಿಟಿಗಳು ಭಾಗಿ ಆಗಿದ್ದಾರೋ ಇಲ್ಲವೋ ಎಂದು ಈಗಲೇ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ’ ಎಂದು ಮಾಧ್ಯಮವೊಂದಕ್ಕೆ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದಾರೆ.

- Advertisement -
spot_img

Latest News

error: Content is protected !!