Sunday, April 28, 2024
Homeಆರಾಧನಾಅಯೋಧ್ಯೆಯಲ್ಲಿ ಪೇಜಾವರ ಶ್ರೀಗಳ ಸುಧಾಮಂಗಲೋತ್ಸವ ಸಂಪನ್ನ

ಅಯೋಧ್ಯೆಯಲ್ಲಿ ಪೇಜಾವರ ಶ್ರೀಗಳ ಸುಧಾಮಂಗಲೋತ್ಸವ ಸಂಪನ್ನ

spot_img
- Advertisement -
- Advertisement -

ಅಯೋಧ್ಯೆ: ಶ್ರೀ ಪೇಜಾವರ ಮಠಾಧೀಶರಾದ ವೈಭವದಿಂದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಅಯೋಧ್ಯೆಯಲ್ಲಿ 48 ದಿನಗಳ ಮಂಡಲೋತ್ಸವವನ್ನು ನಡೆಸುತ್ತಿದ್ದು, ಗುರುವಾರದಂದು ತಮ್ಮ ವಿದ್ಯಾರ್ಥಿಗಳಿಗೆ ಶ್ರೀಮನ್ಯಾಯಸುಧಾ ಮಂಗಲೋತ್ಸವ ನಡೆಸಿ ರಾಮನಿಗೆ ಜ್ಞಾನ ಪುಷ್ಪವನ್ನು ಸಮರ್ಪಿಸಿದರು.

ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ಘಟಿಕೋತ್ಸವವು ಅಯೋಧ್ಯೆಯ ತೀರ್ಥಕ್ಷೇತ್ರಪುರಮ್‌ನ ಟೆಂಟ್ ಸಿಟಿ ಸಭಾಂಗಣದಲ್ಲಿ ನಡೆಯಿತು. ವಿದ್ಯಾಪೀಠದಲ್ಲಿ 13 ವರ್ಷಗಳ ವ್ಯಾಸಂಗ ಮುಗಿಸಿದ 14 ವಿದ್ಯಾರ್ಥಿಗಳು ಮಂಗಲೋತ್ಸವವನ್ನು ಶ್ರೀರಾಮನಿಗೆ ಶ್ರೀ ಪಲಿಮಾರು ಉಭಯ ಶ್ರೀಗಳು, ಪೇಜಾವರ ಶ್ರೀ, ಚಿತ್ರಾಪುರ ಮಠದ ಶ್ರೀ ವಿದ್ಯೆàಂದ್ರತೀರ್ಥರು ಸಾನ್ನಿಧ್ಯ ವಹಿಸಿ ಶ್ರೀ ಜಯತೀರ್ಥ ಗುರುವಿರಚಿತ ಶ್ರೀಮನ್ಯಾಯಸುಧಾನುವಾದ ಹಾಗೂ ಜಗದ್ಗುರು ಮಧ್ವಾಚಾರ್ಯರ ತಣೀವಾದದ ಹಿನ್ನೆಲೆಯಲ್ಲಿ ಸಂದೇಶ ನೀಡಿದರು.

ಸಮಾರಂಭದಲ್ಲಿ ಹಿರಿಯ ವಿದ್ವಾಂಸರಾದ ಪ್ರೊ| ಎ. ಹರಿದಾಸ ಭಟ್, ರಾಮವಿಟuಲಾಚಾರ್ಯ, ಸತ್ಯಧ್ಯಾನಾಚಾರ್ಯ ಕಟ್ಟಿ ಜಿ.ಪಿ. ನಾಗರಾಜ ಆಚಾರ್ಯ, ರಘುಪತಿ ಉಪಾಧ್ಯಾಯ, ತಿರುಮಲ ಕುಲಕರ್ಣಿ, ಬ್ರಹ್ಮಣ್ಯಾಚಾರ್ಯ ಮೊದಲಾದವರಿದ್ದರು. ವಿದ್ಯಾಪೀಠದ ಪ್ರಾಚಾರ್ಯ ವಿದ್ವಾನ್ ಸತ್ಯನಾರಾಯಣಾಚಾರ್ಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

- Advertisement -
spot_img

Latest News

error: Content is protected !!