Friday, May 3, 2024
Homeತಾಜಾ ಸುದ್ದಿಧಾರ್ಮಿಕ ದತ್ತಿ ಇಲಾಖೆ ಬಿಲ್ ಮತ್ತೆ ಪಾಸ್ ಮಾಡಿದ ವಿಚಾರ: ವಿಧಾ‌ನ ಪರಿಷತ್ ವಿಪಕ್ಷ ನಾಯಕ...

ಧಾರ್ಮಿಕ ದತ್ತಿ ಇಲಾಖೆ ಬಿಲ್ ಮತ್ತೆ ಪಾಸ್ ಮಾಡಿದ ವಿಚಾರ: ವಿಧಾ‌ನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಸುದ್ದಿಗೋಷ್ಠಿ

spot_img
- Advertisement -
- Advertisement -

ಬೆಂಗಳೂರು; ಧಾರ್ಮಿಕ ದತ್ತಿ ಇಲಾಖೆ ಬಿಲ್ ಮತ್ತೆ ಪಾಸ್ ಮಾಡಿದ ವಿಚಾರಕ್ಕೆ ಸಂಬಂಧಪಟ್ಟಂತೆ ವಿಧಾ‌ನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಸುದ್ದಿಗೋಷ್ಠಿ ನಡೆಸಿದ್ರು.

ದೇವಸ್ಥಾನಗಳಲ್ಲಿ ಬರುವ ಆದಾಯದಲ್ಲಿ ಪಾಲು ಪಡೆಯೋಕೆ ಮುಂದಾಗಿದೆ.ಉದಾಹರಣೆಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ನೂರು ಕೋಟಿ ಆದಾಯ ಇದೆ.ಅದರಲ್ಲಿ ಹತ್ತು ಕೋಟಿ ಆದಾಯ ಸರ್ಕಾರ ತೆಗೆದುಕೊಳ್ಳಲಿದೆ.ಅದನ್ನ ಮುಸ್ಲಿಂ ಸಮುದಾಯದ ಅಭಿವೃದ್ಧಿ ಮಾಡಲು ಮುಂದಾಗಿದೆ ಎಂದು ಗುಡುಗಿದ್ದಾರೆ.

ನೀವು ಅಲ್ಪಸಂಖ್ಯಾತರಿಗೆ ಕೊಡಿ, ನಾವು ಬೇಡ ಅನ್ನಲ್ಲ.ಸರ್ಕಾರದ ಬೇರೆ ಬೊಕ್ಕಸದ ಹಣ ಬಳಕೆ ಮಾಡಿ.ದೇವಸ್ಥಾನದ ಹಣ, ದೇವಸ್ಥಾನಕ್ಕೆ ಬಳಸಿ ಅನ್ನೋದು ನಮ್ಮ‌ ಆಗ್ರಹ ಎಂದಿದ್ದಾರೆ.ಸಾಮಾನ್ಯ ಹಣ ನಿಧಿ ಅಂತ ಇದೆ.ಹತ್ತು ಲಕ್ಷ ಹಣ ಪ್ರತೀ ದೇವಸ್ಥಾನಕ್ಕೆ ಕೊಡಲಾಗುತ್ತೆ.ಮೊದಲಿಂದಲೂ ಇದು ಇದೆ‌.ದೊಡ್ಡ ದೇವಸ್ಥಾನದಿಂದ ಹಣ ತೆಗೆದು, ಸಣ್ಣ ದೇವಸ್ಥಾನ ಅಭಿವೃದ್ಧಿ ಮಾಡಿದ್ದೇವೆ‌.ನಾವು ಮಾಡಿದ್ದೇವೆ.ಆದ್ರೆ ಈಗ ನೂರಾರು ಕೋಟಿ ಬಳಕೆ ಮಾಡ್ತಿದ್ದಾರೆ.ಹೆಚ್ಚು ಹಣ ತೆಗೆಯಬೇಡಿ, ಸರ್ಕಾರದ ಭಂಡಾರದಿಂದ ಕೊಡಿ ಅಂತ ಮನವಿ ಮಾಡ್ತಿದ್ದೇವೆ.ಆದರೆ ಅದಕ್ಕೆ ಬಿಜೆಪಿ ವಿರೋಧ ಅಂತ ಕಾಂಗ್ರೆಸ್ ಆರೋಪ ಮಾಡ್ತಿದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

- Advertisement -
spot_img

Latest News

error: Content is protected !!