Saturday, October 17, 2026
Homeಮನರಂಜನೆಗೋಲ್ಡನ್ ಸ್ಟಾರ್ ಗೆ ವಿಶ್ ಮಾಡಲು ಹೋಗಿ ಮಿಸ್ಟೇಕ್ ಮಾಡ್ಕೊಂಡ ಕಿಚ್ಚ ಸುದೀಪ್

ಗೋಲ್ಡನ್ ಸ್ಟಾರ್ ಗೆ ವಿಶ್ ಮಾಡಲು ಹೋಗಿ ಮಿಸ್ಟೇಕ್ ಮಾಡ್ಕೊಂಡ ಕಿಚ್ಚ ಸುದೀಪ್

- Advertisement -
- Advertisement -

ಬೆಂಗಳೂರು : ಗೋಲ್ಡನ್ ಸ್ಟಾರ್ ಗಣೇಶ್ ಬರ್ತ್ ಡೇಗೆ ಎರಡು ದಿನ ಮೊದಲೇ ವಿಶ್ ಮಾಡಿ ಕಿಚ್ಚ ಸುದೀಪ್ ಟ್ರೋಲ್ ಗೊಳಗಾಗಿದ್ದಾರೆ. ತಮ್ಮ ತಪ್ಪು ಅರಿವಾಗುತ್ತಿದ್ದಂತೇ ಮತ್ತೊಂದು ಟ್ವೀಟ್ ಮಾಡಿ ತಿದ್ದಿಕೊಂಡಿದ್ದಾರೆ.

ನಾಳೆ ಅಂದ್ರೆ  ನಾಳೆ ಜುಲೈ 2 ಕ್ಕೆ ಗಣೇಶ್ ಅವರ ಬರ್ತಡೇ. ಆದರೆ ಕಿಚ್ಚ ನಿನ್ನೆಯೇ ಬರ್ತ್ ಡೇಗೆ ವಿಶ್ ಮಾಡಿದ್ದರು. ಆದರೆ ಇದಕ್ಕೆ ನೆಟ್ಟಿಗರು ಟ್ರೋಲ್ ಮಾಡ್ತಿದ್ದಂತೆ ಎಚ್ಚೆತ್ತುಕೊಂಡ ಕಿಚ್ಚ ಮತ್ತೊಂದು ಟ್ವೀಟ್ ಮಾಡಿ ನನ್ನಿಂದ ತಪ್ಪಾಗಿದೆ ಎಂದು ತಿದ್ದಿಕೊಂಡಿದ್ದಾರೆ.
 
ಇದನ್ನು ಅಡ್ವಾನ್ಸ್ ವಿಶ್ ಎಂದುಕೋ ಗೆಳೆಯ. ನಾನು ಇಂದು ನಿನ್ನ ಜನ್ಮದಿನವೆಂದು ತಪ್ಪಾಗಿ ತಿಳಿದುಕೊಂಡು ವಿಶ್ ಮಾಡಿದೆ. ನೀನು ಸರಳವಾಗಿ ಬರ್ತ್ ಡೇ ಆಚರಿಸಿಕೊಳ್ಳಲು ನಿರ್ಧರಿಸಿರುವುದಕ್ಕೆ ಅಭಿನಂದನೆಗಳು ಎಂದು ಸುದೀಪ್ ಮತ್ತೊಂದು ಟ್ವೀಟ್  ಮಾಡಿದ್ದಾರೆ.

- Advertisement -

Latest News

error: Content is protected !!