Monday, June 8, 2026
Homeಇತರನಿನ್ನೆ ಬಳ್ಳಾರಿ ಇವತ್ತು ಯಾದಗಿರಿ, ಕೊರೊನಾ ಸೋಂಕಿತ ಶವವನ್ನು ಎಸೆದು ಅಂತ್ಯಕ್ರಿಯೆ ಮಾಡಿದ ಸಿಬ್ಬಂದಿ

ನಿನ್ನೆ ಬಳ್ಳಾರಿ ಇವತ್ತು ಯಾದಗಿರಿ, ಕೊರೊನಾ ಸೋಂಕಿತ ಶವವನ್ನು ಎಸೆದು ಅಂತ್ಯಕ್ರಿಯೆ ಮಾಡಿದ ಸಿಬ್ಬಂದಿ

- Advertisement -
- Advertisement -

ಯಾದಗಿರಿ :   ನಿನ್ನೆ ಬಳ್ಳಾರಿಯಲ್ಲಿ ಕೊರೊನಾ ಸೋಂಕಿತ ವ್ಯಕ್ತಿಗಳ ಶವಗಳನ್ನು ಗುಂಡಿಗೆ ಅಮಾನವೀಯವಾಗಿ ಎಸೆದು ಅಂತ್ಯಸಂಸ್ಕಾರ ಮಾಡುತ್ತಿರುವ ವಿಡಿಯೋವೊಂದು ಎಲ್ಲೆಡೆ ವೈರಲ್  ಆಗಿ, ಬಳ್ಳಾರಿ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯ ವಿರುದ್ಧ ಭಾರೀ ವಿರೋಧ ವ್ಯಕ್ತವಾಗಿತ್ತು. ಇದೀಗ ಅಂತಹದ್ದೇ ಘಟನೆ ಯಾದಗಿರಿಯಲ್ಲಿ ನಡೆದಿದೆ.

ಪಿಪಿಟಿ ಕಿಟ್ ಧರಿಸಿದ ಆರೋಗ್ಯ ಸಿಬ್ಬಂದಿಯಿಬ್ಬರು ಪಿಪಿಇ ಕಿಟ್ ನಲ್ಲಿರುವ ಶವವನ್ನು ತಂದು ಗುಂಡಿಗೆ ಎಸೆಯುತ್ತಿರುವ ವಿಡಿಯೋ ವೈರಲ್ ಆಗಿದೆ. ಮಾನವೀಯತೆಯೇ ಇಲ್ಲದಂತೆ ಸಿಬ್ಬಂದಿ ವರ್ತಿಸಿರುವ ವಿಡಿಯೋ ಎಂತಹವರಿಗೂ ಎದೆ ಝಲ್ ಎನ್ನುವಂತೆ ಮಾಡುತ್ತೆ. ಕೊರೊನಾ ರೋಗಿಗಳು ಸತ್ರೆ ಹಾಗಾದ್ರೆ ಅವರಿಗೆ ಬೆಲೆಯೇ ಇಲ್ವೇ ಅವರು ನಮ್ಮ ಹಾಗೇ ಮನುಷ್ಯರಲ್ವೇ? ಅನ್ನೋ ಪ್ರಶ್ನೆ ಕಾಡುವಂತೆ ಮಾಡಿದೆ.    

ಬಳ್ಳಾರಿಯ ಬಳಿಕ ಯಾದಗಿರಿಯಲ್ಲೊಂದು ಅಮಾನವೀಯ ‌ಘಟನೆ#Covid #Corona

Posted by Maha Xpress on Wednesday, 1 July 2020

- Advertisement -

Latest News

error: Content is protected !!