Sunday, June 7, 2026
Homeಕರಾವಳಿಬಿಜೆಪಿ ಜಿಲ್ಲಾಧ್ಯಕ್ಷರ ಕಾರು ಅಪಘಾತ, ಸುದರ್ಶನ್ ಮೂಡುಬಿದರೆ ಅಪಾಯದಿಂದ ಪಾರು

ಬಿಜೆಪಿ ಜಿಲ್ಲಾಧ್ಯಕ್ಷರ ಕಾರು ಅಪಘಾತ, ಸುದರ್ಶನ್ ಮೂಡುಬಿದರೆ ಅಪಾಯದಿಂದ ಪಾರು

- Advertisement -
- Advertisement -

ಮಂಗಳೂರು: ಮೀಜಾರು ಸಮೀಪ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದರೆ ಯವರ ಕಾರು ಅಪಘಾತವಾಗಿದೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.

ಮೀಜಾರು ಸಮೀಪ ಎದುರಿನಿಂದ ನಡೆದುಕೊಂಡು ಹೋಗುತಿದ್ದ ವ್ಯಕ್ತಿಗೆ ಸುದರ್ಶನ್ ರ ಇನ್ನೋವಾ ಕಾರು ಅಪಘಾತವಾಗುವುದನ್ನು ತಪ್ಪಿಸಿದಾಗ , ಕೆಸರಿನಲ್ಲಿ ಕಾರು ಸ್ಕಿಡ್ ಆಗಿ ಎದುರಿನಿಂದ ಬರುತಿದ್ದ ವಾಹನಕ್ಕೆ ಡಿಕ್ಕಿ ಹೊಡೆದು ಇನ್ನೋವಾ ಸಂಪೂರ್ಣ ಜಖಂಗೊಂಡಿದೆ. ಅಪಘಾತದ ತೀವ್ರತೆ ನೋಡಿದ್ರೆ ಸುದರ್ಶನ್ ಅವರು ಯಾವುದೇ ಅಪಾಯಕ್ಕೆ ಒಳಗಾಗದೇ ಇರೋದು ದೇವರ ದಯೆ ಅಂತಾ ಸ್ಥಳೀಯರು ಹೇಳುತ್ತಿದ್ದಾರೆ.

ಅಪಘಾತಕ್ಕೀಡಾದ ಸುದರ್ಶನ್ ಮೂಡಬಿದ್ರೆ ಅವರ ಕಾರು

- Advertisement -

Latest News

error: Content is protected !!