Wednesday, June 24, 2026
Homeಮನರಂಜನೆಖ್ಯಾತ ಕಿರುತೆರೆ ನಟಿಗೆ ಕೊರೊನಾ, ಆತಂಕದಲ್ಲಿ ಸಹ ಕಲಾವಿದರು

ಖ್ಯಾತ ಕಿರುತೆರೆ ನಟಿಗೆ ಕೊರೊನಾ, ಆತಂಕದಲ್ಲಿ ಸಹ ಕಲಾವಿದರು

- Advertisement -
- Advertisement -

ಹೈದರಾಬಾದ್ ಮೊನ್ನೆಯಷ್ಟೇ ತೆಲುಗಿನ ಪ್ರಖ್ಯಾತ ಸೀರಿಯಲ್ ನಟರೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಶೂಟಿಂಗ್ ಸ್ಥಗಿತಗೊಂಡ ಬಗ್ಗೆ ನಾವು ನಿಮಗೆ ಮಹಾ ಎಕ್ಸ್‌ಪ್ರೆಸ್ ನಲ್ಲಿ ಹೇಳಿದ್ದೆವು. ಅಲ್ಲದೇ ನಟಿ ರಶ್ಮಿ ಪ್ರಭಾಕರ್ ಅವರಿಗೂ ಕೊರೊನಾ ಪಾಸಿಟಿವ್ ಅನ್ನೋ ಸುಳ್ಳು ಸುದ್ದಿ ಕೂಡ ಹರಿಡಾಡಿತ್ತು. ಆ ಬಳಿಕ ಅವರು ಕೊರೊನಾ ಇಲ್ಲ ಅನ್ನೋ ಬಗ್ಗೆ ಸ್ಪಷ್ಟನೆ ಕೂಡ ನೀಡಿದ್ದರು. ಇದೀಗ ಕನ್ನಡ ಮೂಲದ ತೆಲುಗು ಧಾರಾವಾಹಿಯ ಖ್ಯಾತ ನಟಿಯೊಬ್ಬರಿಗೆ ಕೊರೊನಾ ಇರೋದು ದೃಢಪಟ್ಟಿದೆ.

ಕನ್ನಡದಲ್ಲಿ ರಕ್ಷಿತಾ ಪ್ರೇಮ್ ನಡೆಸಿಕೊಡುತ್ತಿದ್ದ ಸ್ವಯಂವರ ಕಾರ್ಯಕ್ರಮದ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟ ನವ್ಯ ಸ್ವಾಮಿ, ಆ ಬಳಿಕ ತಂಗಾಳಿ ಸೇರಿದಂತೆ ಅನೇಕ ಸೀರಿಯಲ್ ಗಳಲ್ಲಿ ಅಭಿನಯಿಸಿದ್ದರು. ಕೆಲವು ಕನ್ನಡ ಸಿನಿಮಾಗಳಲ್ಲಿಯೂ ನವ್ಯಾ ಕಾಣಿಸಿಕೊಂಡಿದ್ದರು. ಆ ಬಳಿಕ ತೆಲುಗು ಕಿರುತೆರೆಯತ್ತ ತೆರಳಿದ ನವ್ಯಾ,ಸದ್ಯ ನಾ ಪೇರು ಮೀನಾಕ್ಷಿ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದರು. ಲಾಕ್ ಡೌನ್ ಬಳಿಕ ಈ ಧಾರಾವಾಹಿ ತಂಡ ಕೆಲವೊಂದು ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಶೂಟಿಂಗ್ ಆರಂಭಿಸಿತ್ತು. ಆದರೆ ಇದೀಗ ಈ ಸೀರಿಯಲ್ ನ ಪ್ರಮುಖ ಪಾತ್ರಧಾರಿ ನವ್ಯಾಗೆ ಕೊರೊನಾ ಕಾಣಿಸಕೊಂಡಿರೋದರಿಂದ ಶೂಟಿಂಗ್ ಸ್ಥಗಿತಕೊಂಡಿದೆ.  ಅವರು ಕ್ವಾರಂಟೈನ್ ನಲ್ಲಿದ್ದಾರೆ. ಅಂದ್ಹಾಗೆ ನವ್ಯಾ ಮೂಲತಃ ಮೈಸೂರಿನವರು.

- Advertisement -

Latest News

error: Content is protected !!