Thursday, June 4, 2026
Homeತಾಜಾ ಸುದ್ದಿಕಬಡ್ಡಿ ಪಂದ್ಯ ವೀಕ್ಷಣೆ ವೇಳೆ ವಿದ್ಯಾರ್ಥಿಗಳ ಜಗಳ; ಮಚ್ಚು ಬೀಸಿದ ಅಪ್ರಾಪ್ತ ವಿದ್ಯಾರ್ಥಿ

ಕಬಡ್ಡಿ ಪಂದ್ಯ ವೀಕ್ಷಣೆ ವೇಳೆ ವಿದ್ಯಾರ್ಥಿಗಳ ಜಗಳ; ಮಚ್ಚು ಬೀಸಿದ ಅಪ್ರಾಪ್ತ ವಿದ್ಯಾರ್ಥಿ

- Advertisement -
- Advertisement -

ಹಾಸನ: ಕಬ್ಬಡಿ ಪಂದ್ಯಾಟದ ವೇಳೆ ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ ನಡೆದು ಪರಸ್ಪರ ಬಡಿದಾಡಿಕೊಂಡ ಘಟನೆ ಹಾಸನದಲ್ಲಿ ನಡೆದಿದೆ.

ಹಾಸನ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಸಂಜೆ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದ ವೇಳೆ ಈ ಘಟನೆ ನಡೆದಿದೆ.

ಹೊಡೆದಾಟದ ವೇಳೆ ವಿದ್ಯಾರ್ಥಿ ಮೇಲೆ ಓರ್ವ ಅಪ್ರಾಪ್ತ ವಿದ್ಯಾರ್ಥಿ ಮಚ್ಚು ಬೀಸಿದ್ದು, ವಿದ್ಯಾರ್ಥಿಗಳು ಅಪಾಯದಿಂದ ತಪ್ಪಿಸಿಕೊಂಡಿದ್ದಾರೆ.

ಕಬ್ಬಡಿ ಪಂದ್ಯ ವೀಕ್ಷಣೆ ವೇಳೆ ಜಗಳ ಶುರುವಾಗಿದ್ದು, ಮಚ್ಚು ಬೀಸಿದ್ದ ವಿದ್ಯಾರ್ಥಿಗೆ ಉಳಿದ ವಿದ್ಯಾರ್ಥಿಗಳು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಮಚ್ಚು ಬೀಸಿದ್ದ ವಿದ್ಯಾರ್ಥಿ ನೆಲಕ್ಕೆ ಬಿದ್ದರೂ ಬಿಡದೇ ಹಲ್ಲೆ ನಡೆಸಿರುವ ವಿದ್ಯಾರ್ಥಿಗಳು ಕಾಲಿನಿಂದ ಒದ್ದು ಥಳಿಸಿದ್ದಾರೆ.
ಗಾಯಾಳು ವಿದ್ಯಾರ್ಥಿಗೆ ಹಾಸನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ

- Advertisement -

Latest News

error: Content is protected !!