- Advertisement -
![]()
- Advertisement -
ಮಂಗಳೂರು: ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದ ಆಡಳಿತ ಮೊಕ್ತೇಸರರಾಗಿದ್ದ ಬಿ. ದಾಮೋದರ ನಿಸರ್ಗ ಅವರು ನಿಧನರಾಗಿದ್ದಾರೆ.
ದಾಮೋದರ ನಿಸರ್ಗ ಅವರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ತುಳುಕೂಟದ ಅಧ್ಯಕ್ಷರಾಗಿ ತುಳು ಸಾಹಿತ್ಯ ಕ್ಷೇತ್ರಕ್ಕೆ ಅದ್ವಿತೀಯ ಕೊಡುಗೆ ನೀಡಿದ್ದರು.ಅಲ್ಲದೇ, ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಮಾಜಿ ಅಧ್ಯಕ್ಷರಾಗಿಯೂ ದಾಮೋದರ ನಿಸರ್ಗ ಕಾರ್ಯನಿರ್ವಹಿಸಿದ್ದರು.
ದಾಮೋದರ ನಿಸರ್ಗ ಅವರ ನಿಧನಕ್ಕೆ ಸಂಸದ ಕ್ಯಾ. ಬ್ರಿಜೇಶ್ ಚೌಟ, ಮಾಜಿ ಸಂಸದ ನಳೀನ್ ಕುಮಾರ್ ಕಟೀಲ್ ಮತ್ತು ಶಾಸಕ ವೇದವ್ಯಾಸ ಕಾಮತ್ ಸೇರಿದಂತೆ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
- Advertisement -


