- Advertisement -
![]()
- Advertisement -
ಉಡುಪಿ: ನೇಣು ಬಿಗಿದುಕೊಂಡು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಜ್ಜರಕಾಡುವಿನಲ್ಲಿ ಇಂದು ಸಂಜೆ ನಡೆದಿದೆ.ಅಜ್ಜರಕಾಡು ನಿವಾಸಿ ಸರಿಟ ವೇಗಸ್ ಹಾಗೂ ಮನೋಹರ್ ವೇಗಸ್ ದಂಪತಿ ಪುತ್ರ ತುಷಾರ್ ವೇಗಾಸ್ (17) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.
ಉಡುಪಿಯ ಎಂ.ಜಿ.ಎಂ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿ ಯಾಗಿದ್ದ ತುಷಾರ್, ಕಾಲೇಜಿನಿಂದ ಮನೆಗೆ ಬಂದು ರೂಮಿನಲ್ಲಿ ಮಲಗಿದ್ದ. ಈ ವೇಳೆ ತುಷಾರ್ ರೂಮಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ತುಷಾರ್ ಯಾವುದೋ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
- Advertisement -


