Tuesday, June 9, 2026
Homeಕರಾವಳಿಪುತ್ತೂರು: ಕೋರ್ಟ್ ರಸ್ತೆಯಲ್ಲಿ ನಸುಕಿನ ಜಾವ ಫ್ಯಾನ್ಸಿ ಸ್ಟೋರ್ ಗೆ ಬೆಂಕಿ ಹಚ್ಚಿದ ಪ್ರಕರಣ; ಮೂವರನ್ನು...

ಪುತ್ತೂರು: ಕೋರ್ಟ್ ರಸ್ತೆಯಲ್ಲಿ ನಸುಕಿನ ಜಾವ ಫ್ಯಾನ್ಸಿ ಸ್ಟೋರ್ ಗೆ ಬೆಂಕಿ ಹಚ್ಚಿದ ಪ್ರಕರಣ; ಮೂವರನ್ನು ವಶಕ್ಕೆ ಪೊಲೀಸರು

- Advertisement -
- Advertisement -

ಪುತ್ತೂರು: ಕೋರ್ಟ್ ರಸ್ತೆಯಲ್ಲಿರುವ  ಇಲ್ಯಾಸ್‌  ಎಂಬವರ ಮಾಲೀಕತ್ವದ ಬ್ಲಾಕ್‌ ಡೈಮಂಡ್‌ ಫ್ಯಾನ್ಸಿ ಸ್ಟೋರ್ ಗೆ ನಸುಕಿನ ಜಾವ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ.

ಬೈಕ್‌ನಲ್ಲಿ ಹೆಲ್ಮೆಟ್‌ ಧರಿಸಿ ಬಂದ ವ್ಯಕ್ತಿ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿರುವುದು ಅಂಗಡಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇನ್ನು ಮೊಸರುಕುಡಿಕೆ ಉತ್ಸವದ ಸಿದ್ಧತೆಯಲ್ಲಿ ತೊಡಗಿದ್ದ ಕಾರ್ಯಕರ್ತರ ಮೇಲೆ ಬುರ್ಖಾಧಾರಿ ಮಹಿಳೆ ಆ.22ರಂದು ರಾತ್ರಿ ಹಲ್ಲೆ ನಡೆಸಿರುವ ಬೆನ್ನಲ್ಲೇ ಮುಂಜಾನೆ ಫ್ಯಾನ್ಸಿಗೆ ಬೆಂಕಿ ಹಚ್ಚಲಾಗಿದೆ.  ಹಾಗಾಗಿ ಈ ಎರಡೂ ಘಟನೆಗಳಿಗೆ ಸಂಬಂಧ ಇದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!