Thursday, June 4, 2026
Homeತಾಜಾ ಸುದ್ದಿಹಿಂದಿನ ಕಾಲದಲ್ಲಿ ಫೋಟೋಗ್ರಫಿ ಇತ್ತಾ? ಹುಚ್ಚು ಮುಂಡೆದು ಪ್ರತಾಪ್ ಸಿಂಹನಿಗೆ ಏನೂ ಗೊತ್ತಿಲ್ಲ: ಸಿಎಂ ಇಬ್ರಾಹಿಂ

ಹಿಂದಿನ ಕಾಲದಲ್ಲಿ ಫೋಟೋಗ್ರಫಿ ಇತ್ತಾ? ಹುಚ್ಚು ಮುಂಡೆದು ಪ್ರತಾಪ್ ಸಿಂಹನಿಗೆ ಏನೂ ಗೊತ್ತಿಲ್ಲ: ಸಿಎಂ ಇಬ್ರಾಹಿಂ

- Advertisement -
- Advertisement -

ಮೈಸೂರು: ಟಿಪ್ಪುವನ್ನು ಮೈಸೂರು ಹುಲಿ ಎಂದು ಹೇಳಲು ಒಂದು ಕಾರಣ ಕೊಡಿ ಎಂದಿದ್ದ ಸಂಸದ ಪ್ರತಾಪ್‌ ಸಿಂಹ ವಿರುದ್ಧ ಜೆಡಿಎಸ್‌ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಕಿಡಿಕಾರಿದ್ದಾರೆ. ಹುಚ್ಚು ಮುಂಡೆದು ಪ್ರತಾಪ್ ಸಿಂಹಗೆ ಏನೂ ಗೊತ್ತಿಲ್ಲ. ಟಿಪ್ಪು ಬಗ್ಗೆ 70 ವರ್ಷದಿಂದ ಬರೆದುಕೊಂಡು ಬಂದಿದ್ದಾರೆ. ಚಿತ್ರದಲ್ಲಿ ಟಿಪ್ಪು ಸುಲ್ತಾನ್ ಅವರನ್ನು ಹುಲಿಯ ಜೊತೆ ತೋರಿಸಿದ್ದಾರೆ. ಹಾಗಾದ್ರೆ ಹಿಂದಿನ ಕಾಲದಲ್ಲಿ ಫೋಟೊಗ್ರಫಿ ಇತ್ತಾ. ಹುಲಿನ ಹೊಡೆಯೊಕೆ ಹೋಗಿರುವುದನ್ನ ಯಾರಾದ್ರು ಫೋಟೊ ತೆಗೆದಿದ್ದಾರಾ ಎಂದು ಇಬ್ರಾಹಿಂ ಪ್ರಶ್ನಿಸಿದ್ರು.

ಮೈಸೂರಿನಲ್ಲಿ ಮಾತನಾಡಿದ ಅವರು, ಯಡಿಯೂರಪ್ಪನನ್ನ ಹುಲಿಯಾ ಅಂತೀವಿ, ರಾಜಾಹುಲಿ ಅಂತೀವಿ. ಹಾಗಾದ್ರೆ ಅವರು ಕಾಡಿನಲ್ಲಿದ್ದರಾ? ಒಬ್ಬ ಸಂಸದರಾಗಿ ಏನು ಮಾತನಾಡಬೇಕೆಂಬ ಪ್ರಜ್ಞೆ ಇಲ್ಲ. ಮೈಸೂರು ಕುವೆಂಪು ಅವರ ನಾಡು. ಪುಟ್ಟಪ್ಪನವರ ಬಳಿ ನಾವೆಲ್ಲಾ ಪಾಠ ಕೇಳಿದ್ದೇವೆ. ಪುಟ್ಟಪ್ಪನವರ ಪುಸ್ತಕಗಳನ್ನು ತೆಗೆಯಲು ಹೊರಟಿದ್ದಾರೆ. ನಮ್ಮವ್ವ ಕರ್ನಾಟಕ ಮಾತೆ, ನಮ್ಮ ಅಜ್ಜಿ ಭಾರತ ಮಾತೆ. ಮೊದಲು ಅವ್ವನನ್ನು ನೋಡ್ಲಾ ಅಂದ್ರೆ ಅಜ್ಜಿ ನೋಡಕೆ ಹೊರಟವರೇ ಎಂದು ವ್ಯಂಗ್ಯವಾಡಿದರು

- Advertisement -

Latest News

error: Content is protected !!