Wednesday, May 15, 2024
Homeತಾಜಾ ಸುದ್ದಿಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಕೇಸ್ ಗೆ ಮತ್ತೊಂದು ಟ್ವಿಸ್ಟ್: ರಿವೀಲ್‌ ಆಯ್ತು ಹೊಸ ವಾಟ್ಸ್‌...

ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಕೇಸ್ ಗೆ ಮತ್ತೊಂದು ಟ್ವಿಸ್ಟ್: ರಿವೀಲ್‌ ಆಯ್ತು ಹೊಸ ವಾಟ್ಸ್‌ ಆಪ್‌ ಚಾಟ್

spot_img
- Advertisement -
- Advertisement -

ಬೆಂಗಳೂರು. ಬಿಜೆಪಿ‌ ಮುಖಂಡ ಅನಂತರಾಜು ಕೇಸ್ ಬಗೆದಷ್ಟು ಆಳಕ್ಕೆ ಹೋಗ್ತಿದೆ. ಸುಮಾ ಮತ್ತು ರೇಖಾ  ಪರ ವಿರೋಧದ ಸಾಕ್ಷ್ಯಗಳು ದಿನಕ್ಕೊಂದರಂತೆ ಹೊರ ಬೀಳ್ತಿವೆ. ಮೇಲ್ನೋಟಕ್ಕೆ ಎಲ್ಲವೂ ಸತ್ಯದಂತೆ ಕಂಡ್ರು ಹೊರಬರ್ತಿರೋ ಮಾಹಿತಿಯ ಅಸಲಿಯತ್ತು ಏನೂ ಅನ್ನೋದನ್ನ ಪೊಲೀಸರೇ ಪತ್ತೆಮಾಡಬೇಕು. ಇನ್ನೂ ಇಂದು ರೇಖಾ ಜೈಲಿನಿಂದ ಹೊರಬರ್ತಿರೋ ಹೊತ್ತಲ್ಲಿ  ಮತ್ತೊಂದು ವಾಟ್ಸ್ ಆಪ್ ಚಾಟ್ ರಿವೀಲ್ ಆಗಿದೆ. ರೇಖಾ ಮತ್ತು ಸುಮಾ ಅನಂತರಾಜು ಸಂಪರ್ಕಿತ ವ್ಯಕ್ತಿಗೆ ಜತೆಗೆ ನಡೆಸಿದ್ದಾರೆನ್ನಲಾದ ವಾಟ್ಸ್ ಅಪ್ ಚಾಟಿಂಗ್ ರಿವೀಲ್ ಆಗಿದ್ದು, ಈ  ವಾಟ್ಸಾಪ್ ಚಾಟಿಂಗ್ ನಲ್ಲಿ ಸೆಟಲ್ಮೆಂಟ್ ಬಗ್ಗೆ ಪ್ರಸ್ತಾಪ ಆಗಿರೋದು ಸಾಕಷ್ಟು ಕುತುಹಲ ಮೂಡಿಸಿದೆ.

ಅನಂತರಾಜು ನನಗೆ ಮೋಸ ಮಾಡಿದ್ದಾನೆ. ನನ್ನ ಮಾನ ಮರ್ಯಾದೆಗೆ ಧಕ್ಕೆ ತಂದಿದ್ದಾನೆ. ನನ್ನ ಮಕ್ಕಳಿಗಾಗಿ ಯಾರ ಮರ್ಯಾದೆ ಕಳೆಯೋದಕ್ಕೂ ನಾನು ಸಿದ್ಧ ಅನ್ನೋ ರೀತಿ ರೇಖಾ ಮಾಡಲಾದ ಮೇಸೆಜ್ ಎಂದು ಸ್ಕ್ರೀನ್ ಶಾಟ್ ಓಡಾಡ್ತಿವೆ. ಈ ಚಾಟ್ ನಲ್ಲಿ ಅನಂತರಾಜು ನನ್ನ ಜೊತೆ ಕಳೆದ ಖಾಸಗೀ ವಿಡಿಯೋಗಳು ನನ್ನ ಬಳಿ ಇದೆ. ಅದನ್ನ ಅವನ ಹೆಂಡ್ತಿಗೆ ಕಳಿಸಿದ್ರೆ ಅವಳೇ ಅನಂತರಾಜುನ ಸಾಯಿಸ್ತಾಳೆ. ಅಷ್ಟೊಂದು ಆಶ್ಲೀಲವಾಗಿದೆ ಆ ವೀಡಿಯೋಗಳು. ಈ ರೀತಿ ಆಗ್ಬಾರ್ದು ಅನ್ನೋದಾದ್ರೆ ಅನಂತರಾಜುನ ಮೇ 15 ರ ಒಳಗೆ ನನ್ನ ಭೇಟಿ ಮಾಡ್ಬೇಕು ಸೆಟಲ್‌ ಮೆಂಟ್ ಮಾಡಿಕೊಂಡು ನೆಮ್ಮದಿಯಾಗಿರಲಿ ಎಂದು ಚಾಟ್ ಸಾರಾಂಶ ಹೇಳುತ್ತೆ.

ಇನ್ನೊಂದು ಮೂಲಗಳ ಪ್ರಕಾರ ಅನಂತರಾಜು ಬಚಾವ್ ಮಾಡೋಕೆ ರೇಖಾ ಅನಂತರಾಜು ಸೇರಿ ಈ ರೀತಿನೇ  ಮಾತನಾಡಿ ಸುಮಾಳನ್ನ ನಂಬಿಸುವ ಕೆಲಸ ಮಾಡಿದ್ರು ಎಂದು ಹೇಳಲಾಗ್ತಿದೆ. ಆದ್ರೆ ಅದೇ ಇಂದು ರೇಖಾಳಿಗೆ ಮುಳುವಾಗಿದ್ಯಾ ಅನ್ನೋ ಪ್ರಶ್ನೆ ಮೂಡಿದೆ‌.

- Advertisement -
spot_img

Latest News

error: Content is protected !!