Wednesday, June 3, 2026
Homeತಾಜಾ ಸುದ್ದಿಮಾಡಿದವನ ಪಾಪ, ಆಡಿದವನ ಬಾಯಲ್ಲಿ ಅಂತಾರೆ: ಹಾಗಾಗಿ ನನ್ನ ಬಾಯಲ್ಲಿ ಹೇಳಿಸಬೇಡಿ: ಡಿಕೆಶಿ ವಿರುದ್ದ ಕೆ.ಎಸ್.‌...

ಮಾಡಿದವನ ಪಾಪ, ಆಡಿದವನ ಬಾಯಲ್ಲಿ ಅಂತಾರೆ: ಹಾಗಾಗಿ ನನ್ನ ಬಾಯಲ್ಲಿ ಹೇಳಿಸಬೇಡಿ: ಡಿಕೆಶಿ ವಿರುದ್ದ ಕೆ.ಎಸ್.‌ ಈಶ್ವರಪ್ಪ ಹೇಳಿಕೆ

- Advertisement -
- Advertisement -

ವಿಜಯಪುರ: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆದಾಯ ಮೀರಿ ಆಸ್ತಿ ಹಾಗೂ ಹಣ ಸಂಪಾದಿಸಿದ್ದರ ವಿರುದ್ಧ ನ್ಯಾಯಾಲಯದಲ್ಲಿ ಚಾರ್ಜ್‌ಶೀಟ್ ಸಲ್ಲಿಕೆಯಾದ ವಿಷಯ ನನಗೆ ಗೊತ್ತಿಲ್ಲ. ಮಾಡಿದವನ ಪಾಪ, ಆಡಿದವನ ಬಾಯಲ್ಲಿಯಂತೆ. ನನ್ನ ಬಾಯಲ್ಲಿ ಏಕೆ ಆಡಿಸುತ್ತೀರಿ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ವ್ಯಂಗ್ಯವಾಡಿದರು.

ನಗರದಲ್ಲಿ ಕನಕದಾಸರ ಪುತ್ಥಳಿ ಅನಾವರಣಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಮಾಡಿದವನ ಪಾಪ, ಆಡಿದವನ ಬಾಯಲ್ಲಿ ಅಂತಾರೆ. ಹಾಗಾಗಿ ನನ್ನ ಬಾಯಲ್ಲಿ ಹೇಳಿಸಬೇಡಿ ಎಂದ ಅವರು, ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಬರೆದ ಸಂವಿಧಾನದಲ್ಲಿ ಕಾನೂನುಗಳಿವೆ. ಯಾರು ದೇಶವನ್ನು ಹಾಳು ಮಾಡಿದ್ದಾರೆ. ಲೂಟಿ ಮಾಡಿದ್ದಾರೆಯೋ ಅವರೆಲ್ಲ ಶಿಕ್ಷೆ ಅನುಭವಿಸಲೇಬೇಕು ಎಂದರು.
ಡಿಕೆಶಿನೋ ಇನ್ನೊಬ್ಬರ ಬಗ್ಗೆ ನನಗೆ ಗೊತ್ತಿಲ್ಲ. ಅವರು ಏನು ಮಾಡಿದ್ದಾರೋ, ಬಿಟ್ಟಿದ್ಧಾರೋ ಗೊತ್ತಿಲ್ಲ. ಆದರೆ ತಪ್ಪು ಮಾಡಿದರೆ ಶಿಕ್ಷೆ ಅನುಭಸಲೇಬೇಕು ಎಂದರು.

- Advertisement -

Latest News

error: Content is protected !!