ಬೆಂಗಳೂರು: ಔರಾದ್ ಕ್ಷೇತ್ರದ ಬಿಜೆಪಿ ಶಾಸಕ ಮತ್ತು ಪಶುಸಂಗೋಪನೆ ಸಚಿವ ಪ್ರಭು ಚೌಹಾಣ್ ಅವರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಹೋಂ ಕ್ವಾಂರಟೈನ್ ಆಗಿದ್ದಾರೆ.
ಎರಡು ದಿನಗಳ ಹಿಂದೆಯಷ್ಟೆ ಪ್ರಭು ಚೌಹಾಣ್ ವಾಹನ ಚಾಲಕನಿಗೆ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ನಿನ್ನೆ ಕೊರೊನಾ ಟೆಸ್ಟ್ ಮಾಡಿಸಿದ್ದರು. ಸಧ್ಯ ವರದಿ ಬಂದಿದ್ದು ಸಚಿವರಿಗೂ ಸೋಂಕು ದೃಢಪಟ್ಟಿದೆ. ಅದ್ರಂತೆ, ವೈದ್ಯರ ಸಲಹೆ ಮೇರೆಗೆ ಹೋಂ ಕ್ವಾರಂಟೈನ್‍ನಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಇವರ ಜೊತೆಗೆ ಬೆಂಗಳೂರಿನ ಆಪ್ತ ಸಹಾಯಕ ಹಾಗೂ ಬೀದರಿನಲ್ಲಿರುವ ಸಚಿವರ ಗನ್‍ಮ್ಯಾನ್‍ಗೂ ಕೊರೊನಾ ಪಾಸಿಟಿವ್ ಆಗಿದೆ.
ಸಚಿವರ ಫೋಸ್ಟ್
ಪ್ರಭು ಚೌವ್ಹಾಣ್ ಅವರು ಫೇಸ್ ಬುಕ್‌ನಲ್ಲಿ, “ನನಗೆ ಕೊರೊನಾ ಪಾಜಿಟಿವ್ ಬಂದಿದೆ ಮೊನ್ನೆಯಷ್ಟೆ ನನ್ನ ವಾಹನ ಚಾಲಕ, ಗನ್ ಮ್ಯಾನ್, ಆಪ್ತ ಸಹಾಯಕರಿಗೆ ಪಾಜಿಟಿವ್ ಬಂದ ಕಾರಣ ಮನೆಯಲ್ಲಿಯೆ ಕ್ವಾರಂಟೈನ್ ಗೆ ಒಳಗಾಗಿದ್ದೆ ನಿನ್ನೆ ಸ್ವತಃ ವೈದ್ಯರನ್ನು ಕರೆಯಿಸಿ ಪರೀಕ್ಷಿಸಿಕೊಂಡಾಗ ಸೋಂಕು ಧೃಢಪಟ್ಟಿದ್ದು ಜೊತೆಗೆ ನನ್ನ ಅಣ್ಣನ ಮಗ ದಿಲೀಪ್ ಚವ್ಹಾಣಗು ಕೂಡ ಸೋಂಕು ಧೃಢಪಟ್ಟಿದೆ”
“ಇತ್ತೀಚೆಗೆ ನನ್ನ ಸಂಪರ್ಕಕ್ಕೆ ಬಂದವರು ಎಚ್ಚರಿಕೆ ವಹಿಸಬೇಕೆಂದು ಕೋರುತ್ತೆನೆ.ನಿಮ್ಮೆಲ್ಲರ ಹಾರೈಕೆ ಹಾಗೂ ಆಶೀರ್ವಾದಗಳೇ ನನಗೆ ಶ್ರೀರಕ್ಷೆ ನಾನು ಶೀಘ್ರದಲ್ಲಿ ಈ ಸೋಂಕಿನಿಂದ ಗುಣಮುಖನಾಗಿ ಬರುತ್ತೆನೆ ದಯವಿಟ್ಟು ಎಲ್ಲರು ಎಚ್ಚರಿಕೆಯಿಂದಿರಿ” ಎಂದು ಫೋಸ್ಟ್ ಹಾಕಿದ್ದಾರೆ.



