Saturday, May 25, 2024
Homeತಾಜಾ ಸುದ್ದಿಮದ್ವೆಯಾಗೋರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ: ಇನ್ಮೇಲೆ ಖರ್ಚಿಲ್ಲದೇ ಏರಬಹುದು ಹಸೆಮಣೆ...

ಮದ್ವೆಯಾಗೋರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ: ಇನ್ಮೇಲೆ ಖರ್ಚಿಲ್ಲದೇ ಏರಬಹುದು ಹಸೆಮಣೆ…

spot_img
- Advertisement -
- Advertisement -

ಬೆಂಗಳೂರು : ಕೊರೊನಾ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಬಹು ದೊಡ್ಡ ಕಾರ್ಯಕ್ರಮವಾಗಿರುವ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಮತ್ತೆ ಶುರು ಮಾಡಲು ಮುಂದಾಗಿದೆ. ನವೆಂಬರ್ ತಿಂಗಳಲ್ಲಿ 19 ಮತ್ತು 27 ಹಾಗೂ ಡಿಸೆಂಬರ್​ ಮಾಹೆಯಲ್ಲಿ 2, 7 ಮತ್ತು 10ರಂದು ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಮತ್ತೆ ಶುರು ಮಾಡುವುದಕ್ಕೆ ರಾಜ್ಯ ಸರ್ಕಾರ ಮನಸ್ಸು ಮಾಡಿದೆ ಅಂತ ತಿಳಿದು ಬಂದಿದೆ.

ಒಂದು ವಿವಾಹ ಜೋಡಿಗೆ ಸರ್ಕಾರದಿಂದ 55,000 ರೂ ವನ್ನು ಖರ್ಚುಮಾಡಲಾಗುತ್ತದೆ. ವಿವಾಹವಾಗುವ ವಧುವಿಗೆ 40,000 ರೂ ವೆಚ್ಚದಲ್ಲಿ 8 ಗ್ರಾಂ ತೂಕದ ಚಿನ್ನದ ತಾಳಿ, ಎರಡು ಚಿನ್ನದ ಗುಂಡು, ವರನಿಗೆ ಐದು ಸಾವಿರ ವೆಚ್ಚದಲ್ಲಿ ಶರ್ಟ, ಶಲ್ಯ, ಪಂಚೆ ಹಾಗೂ ಹೂವಿನ ಹಾರ, ಖರೀದಿಸಲು ಹಾಗೂ ವಧುವಿಗೆ 10 ಸಾವಿರ ರೂ. ವೆಚ್ಚದಲ್ಲಿ ರೇಷ್ಮೆ ಧಾರೆ ಸೀರೆ, ರವಿಕೆ ಕಣ ಹಾಗೂ ಹೂವಿನ ಹಾರ ಖರೀದಿಸಲು ನೀಡಲಾಗುವುದು. ವಿವಾಹಕ್ಕೆ ಆಗಮಿಸುವ ವಧು-ವರರ ಬಂಧುಗಳಿಗೆ ಉಟೋಪಚಾರ ಹಾಗೂ ಇತರೇ ಅವಶ್ಯಕ ವ್ಯವಸ್ಥೆಗಳನ್ನು ದೇವಳ ಸಮಿತಿಯಿಂದ ಅಥವಾ ಸರಕಾರದ ನಿಧಿಯಿಂದ ಭರಿಸಲಾಗುವುದು.

ಸಪ್ತಪದಿ ಸರಳ ಸಾಮೂಹಿಕ ವಿವಾಹಕ್ಕೆ ವಿತರಿಸಿದ ಮತ್ತು ಸ್ವೀಕರಿಸಿದ ಅರ್ಜಿಗಳ ಅಂಕಿ-ಅಂಶಗಳ ದೇವಾಲಯವಾರು, ಜಿಲ್ಲಾವಾರು ಮಾಹಿತಿಯನ್ನು ಸಂಗ್ರಹಿಸಲು ಜಿಲ್ಲಾಧಿಕಾರಿಗಳ ಕಚೇರಿಯ ಮುಜರಾಯಿ ಸಂಕಲದ ಸಿಬ್ಬಂದಿ ನೇಮಿಸಲಾಗಿದೆ. ಆಯಾ ತಾಲೂಕಿಗೆ ಸಂಬಂಧಿಸಿದ ವಿವಾಹ ನೇರವೇರಿಸಲು ಆಯ್ಕೆಯಾಗಿರುವ ದೇವಾಲಯಗಳಲ್ಲಿ ಕರಪತ್ರಗಳು, ಪ್ಲೆಕ್ಸ್ ಹಾಗೂ ಬ್ಯಾನರ್ ಅಳವಡಿಸಿ ಅಗತ್ಯ ಪ್ರಚಾರಗಳನ್ನು ಅಧಿಕಾರಿಗಳು ಕೈಗೊಳ್ಳುತ್ತಾರೆ. ವಿವಾಹಕ್ಕೆ ಅವಶ್ಯಕವಿರುವ ಚಿನ್ನದ ತಾಳಿ, ಗುಂಡು, ವರನಿಗೆ ಪಂಚೆ, ಶಲ್ಯ ಹಾಗೂ ವಧುವಿಗೆ ಧಾರೆ ಸೀರೆ ನೀಡಲಾಗುತ್ತದೆ.

- Advertisement -
spot_img

Latest News

error: Content is protected !!