Wednesday, June 3, 2026
Homeತಾಜಾ ಸುದ್ದಿನನಗೆ ಡಿಸಿ ಆಗ್ಬೇಕು, ಪ್ಲೀಸ್ ನನ್ನನ್ನು ಪಾಸ್ ಮಾಡಿ : ವೈರಲ್ ಆಯ್ತು ಎಸ್ಸೆಸೆಲ್ಸಿ ವಿದ್ಯಾರ್ಥಿಯ...

ನನಗೆ ಡಿಸಿ ಆಗ್ಬೇಕು, ಪ್ಲೀಸ್ ನನ್ನನ್ನು ಪಾಸ್ ಮಾಡಿ : ವೈರಲ್ ಆಯ್ತು ಎಸ್ಸೆಸೆಲ್ಸಿ ವಿದ್ಯಾರ್ಥಿಯ ಉತ್ತರ ಪತ್ರಿಕೆ

- Advertisement -
- Advertisement -

ವಿಜಯಪುರ ನಾನು ಜಿಲ್ಲಾಧಿಕಾರಿ ಆಗ್ಬೇಕು, ದಯವಿಟ್ಟು ನನ್ನನ್ನು ಪಾಸ್ ಮಾಡಿ ಎಂದು ಎಸ್ಸೆಸೆಲ್ಸಿ ವಿದ್ಯಾರ್ಥಿಯೊಬ್ಬ ಉತ್ತರ ಪತ್ರಿಕೆಯಲ್ಲಿ ಮೌಲ್ಯಮಾಪಕರಿಗೆ ಮನವಿ ಮಾಡಿಕೊಂಡಿರುವ ಉತ್ತರ ಪತ್ರಿಕೆ ವೈರಲ್ ಆಗಿದೆ.

ತಾನು ಬಿಲ್ ಕಲೆಕ್ಟರ್ ಆಗಬೇಕಿದೆ, ನನ್ನ ಪಾಸ್ ಮಾಡಿದರೆ ನಿಮಗೆ ದೇವರು ಒಳ್ಳೆಯದು ಮಾಡುತ್ತಾನೆ, ಒಳ್ಳೆಯ ಮನಸ್ಸಿನಿಂದ ನನ್ನ ಪಾಸ್ ಮಾಡಿಕೊಡಿ ಎಂದು ವಿದ್ಯಾರ್ಥಿ ಮನವಿ ಮಾಡಿಕೊಂಡಿದ್ದಾನೆ. ಪದೋನ್ನತಿಗಾಗಿ ಬಾಹ್ಯ ವಿದ್ಯಾರ್ಥಿಯಾಗಿ ಪರೀಕ್ಷೆ ಬರೆದಿರೋ ಅಭ್ಯರ್ಥಿಯೊಬ್ಬ ನನ್ನನ್ನು ದಯವಿಟ್ಟು ಪಾಸ್ ಮಾಡಿ ಎಂದು ಗೋಗರೆದಿದ್ದಾನೆ.‌

ವಿಜಯಪುರ ನಗರದ ಸ್ನೇಹ ಸಂಗಮ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯುತ್ತಿದ್ದ ಮೌಲ್ಯಮಾಪನದ ವೇಳೆ ಉತ್ತರ ಪತ್ರಿಕೆಯಲ್ಲಿ ಈ ರೀತಿ ಬರಹ ಪತ್ತೆಯಾಗಿದೆ.

- Advertisement -

Latest News

error: Content is protected !!