Wednesday, June 3, 2026
Homeತಾಜಾ ಸುದ್ದಿನಟಿ ಶ್ರಾವಣಿ ಆತ್ಮಹತ್ಯೆ ಪ್ರಕರಣ: ಪೊಲೀಸರಿಗೆ ಶರಣಾದ ಚಿತ್ರ ನಿರ್ಮಾಪಕ

ನಟಿ ಶ್ರಾವಣಿ ಆತ್ಮಹತ್ಯೆ ಪ್ರಕರಣ: ಪೊಲೀಸರಿಗೆ ಶರಣಾದ ಚಿತ್ರ ನಿರ್ಮಾಪಕ

- Advertisement -
- Advertisement -

ಹೈದರಾಬಾದ್: ಖ್ಯಾತ ಕಿರುತೆರೆ ನಟಿ ಶ್ರಾವಣಿ ಕೊಂಡಪಲ್ಲಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಈ ಮೊದಲು ಟಿಕ್​ಟಾಕ್​ನಲ್ಲಿ ಪರಿಚಯವಾದ ದೇವರಾಜ್ ಎಂಬಾತನೇ ಶ್ರಾವಣಿಯ ಆತ್ಮಹತ್ಯೆಗೆ ಪ್ರಮುಖ ಕಾರಣ ಎನ್ನಲಾಗಿತ್ತು. ಆದರೆ ಈಗ ದಿನಕಳೆದಂತೆ, ಪೊಲೀಸರ ತನಿಖೆ ಮುಂದುವರೆದಂತೆ ಹೊಸ ಹೊಸ ಆಯಾಮಗಳು ತೆರೆದುಕೊಳ್ಳುತ್ತಿವೆ.

ಕಿರುತೆರೆ ನಟಿ ಶ್ರಾವಣಿ ಕೊಂಡಪಲ್ಲಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ಚಲನಚಿತ್ರ ನಿರ್ಮಾಪಕ ಅಶೋಕ್ ರೆಡ್ಡಿ ಹೈದರಾಬಾದ್ ಪೊಲೀಸರ ಎದುರು ಶರಣಾಗಿದ್ದಾರೆ.

ಶ್ರಾವಣಿ ಕೊಂಡಪಲ್ಲಿ ಆತ್ಮಹತ್ಯೆ ಪ್ರಕರಣದಲ್ಲಿ ಮೂರನೇ ಆರೋಪಿಯಾಗಿರುವ ಅಶೋಕ್ ರೆಡ್ಡಿ ಪಂಜಾಗುಟ್ಟ ಎಸಿಪಿ ತಿರುಪತಣ್ಣ ಅವರ ಎದುರು ಹಾಜರಾಗಿದ್ದು ಅವರನ್ನು ವಶಕ್ಕೆ ಪಡೆಯಲಾಗಿದೆ. ಸೆಪ್ಟೆಂಬರ್ 8 ರಂದು ನಟಿ ಶ್ರಾವಣಿ ಹೈದರಾಬಾದ್ ನ ಮಧುರಾ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

26 ವರ್ಷದ ಶ್ರಾವಣಿ ಆತ್ಮಹತ್ಯೆಗೆ ದೇವರಾಜ್ ರೆಡ್ಡಿ ಮತ್ತು ಸಾಯಿ ಕೃಷ್ಣಾರೆಡ್ಡಿ ಹಾಗೂ ಅಶೋಕ್ ರೆಡ್ಡಿ ಕಾರಣವೆನ್ನಲಾಗಿದೆ. ಪ್ರಾರಂಭದಲ್ಲಿ ದೇವರಾಜ್ ಕಾರಣ ಎಂದು ಹೈದರಾಬಾದ್ ಪೊಲೀಸರು ಆತನನ್ನು ಬಂಧಿಸಿದ್ದರು. ಆದರೆ ಕ್ರಮೇಣ ಶ್ರಾವಣಿ ಸಾವಿಗೆ ಕೇವಲ ಒಬ್ಬರಲ್ಲ ಮೂವರು ಕಾರಣ ಎಂಬುದು ಗೊತ್ತಾದ ಕಾರಣ ಈಗಾಗಲೇ ಸಾಯಿಕೃಷ್ಣ ರೆಡ್ಡಿಯನ್ನು ಬಂಧಿಸಿದ್ದು, ಸದ್ಯ ಅಶೋಕ್ ರೆಡ್ಡಿ ಪೊಲೀಸರಿಗೆ ಶರಣಾಗಿದ್ದಾನೆ. ಈ ಮೂವರು ಪೊಲೀಸರ ವಶದಲ್ಲಿದ್ದು ಇವರ ಕಿರುಕುಳದಿಂದ ಶ್ರಾವಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಪಶ್ಚಿಮ ಗೋದಾವರಿ ಜಿಲ್ಲೆಯ ಶ್ರಾವಣಿ ‘ಮನಸು ಮಮತಾ’ ಮತ್ತು ‘ಮೌನರಾಗಂ’ ಧಾರಾವಾಹಿಗಳ ಮೂಲಕ ಮನೆಮಾತಾಗಿದ್ದರು. ಆಕೆ ಆತ್ಮಹತ್ಯೆ ಮಾಡಿಕೊಂಡ ನಂತರ ಎಸ್‌ಆರ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

- Advertisement -

Latest News

error: Content is protected !!