Wednesday, May 15, 2024
Homeಕರಾವಳಿಧರ್ಮಸ್ಥಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಆಯುಷ್ಯ ವೃದ್ಧಿಗಾಗಿ ಮೃತ್ಯುಂಜಯ ಯಾಗ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ...

ಧರ್ಮಸ್ಥಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಆಯುಷ್ಯ ವೃದ್ಧಿಗಾಗಿ ಮೃತ್ಯುಂಜಯ ಯಾಗ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ನೇತೃತ್ವ

spot_img
- Advertisement -
- Advertisement -

ಧರ್ಮಸ್ಥಳ ದೇವಸ್ಥಾನದ ಮುಂಭಾಗದ ಅಮೃತ ವರ್ಷಿಣಿ ಸಭಾಂಗಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಆಯುಷ್ಯ ವೃದ್ಧಿಗಾಗಿ ಮಹಾ ಮೃತ್ಯುಂಜಯ ಯಾಗ ಆರಂಭಗೊಂಡಿದೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ನೇತೃತ್ವದಲ್ಲಿ ವಿಶೇಷ ರೀತಿಯ ಯಾಗ ನಡೆಸಲಾಗಿದೆ.

ಯಾಗ ಕರ್ತೃಗಳಾಗಿ ಶಾಸಕ ಹರೀಶ್ ಪೂಂಜಾ ದಂಪತಿ ಕುಳಿತುಕೊಂಡಿದ್ದು, ಸಂಜೆ 4.30ಕ್ಕೆ ಯಾಗ ಪೂರ್ವ ವಿಧಿ ಕರ್ಮಗಳು ಆರಂಭಗೊಂಡಿದೆ. 80 ಜನ ಅರ್ಚಕರು ಏಕಕಂಠದಲ್ಲಿ ರುದ್ರ ಪಾರಾಯಣ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹೆಸರಲ್ಲಿ ವಿವಿಧ ವಿಧಿಗಳನ್ನು ನಡೆಸಲಾಗಿದೆ. ಈ ವೇಳೆ, ಒಂದು ಲಕ್ಷ ಮೃತ್ಯುಂಜಯ ಜಪ ಪಾರಾಯಣ ಮಾಡಲಾಗಿದೆ. ಸಂಜೆ 4ರಿಂದ ಆರಂಭಗೊಂಡ ಯಾಗ ಕರ್ಮಾದಿಗಳು ರಾತ್ರಿ 9 ಗಂಟೆ ವರೆಗೆ ನಡೆದಿದ್ದು, ಪೂರ್ಣಾಹುತಿ ನಡೆದಿದೆ. ಭಾನುವಾರದ ಯಾಗ ಕಾರ್ಯದಲ್ಲಿ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಭಾಗವಹಿಸಿದ್ದರು.

ಮೃತ್ಯುಂಜಯ ಯಾಗದ ಪ್ರಧಾನ ಯಜ್ಞಾದಿ ಕರ್ಮಗಳು ಇಂದು ಬೆಳಿಗ್ಗೆ ನಡೆಯಲಿದೆ. ಬೆಳಗ್ಗೆ ಏಳು ಗಂಟೆಯಿಂದ ಚತುರ್ವೇದ ಪಾರಾಯಣ, ಗೋಪೂಜೆ, ಮಹಾಗಣಪತಿ ಹೋಮದ ಬಳಿಕ ಸಪ್ತ ಕುಂಡಗಳಲ್ಲಿ ಮಹಾ ಮೃತ್ಯುಂಜಯ ಹೋಮ ನಡೆಯಲಿದೆ. ಏಳು ಕುಂಡಗಳಿಗೆ ಏಳು ಹೆಸರಿಡಲಾಗಿದ್ದು, ಸದ್ಯೋಜಾತ ಕುಂಡ, ವಾಮದೇವ ಕುಂಡ, ಅಘೋರ ಕುಂಡ, ತತ್ಪುರುಷ ಕುಂಡ, ಈಶಾನ ಕುಂಡ, ತ್ರಯಂಬಕ ಕುಂಡ, ಮೃತ್ಯುಂಜಯ ಕುಂಡದಲ್ಲಿ ಯಾಗ ಹೋಮ ನಡೆಯಲಿದೆ.

ಕೆ.ಸಿ.ನಾಗೇಂದ್ರ ಭಾರದ್ವಾಜ್ ಮಾರ್ಗದರ್ಶನದಲ್ಲಿ ಯಾಗಾದಿ ಕಾರ್ಯಗಳು ನಡೆಯಲಿದ್ದು, ಎಲ್ಲವನ್ನೂ ಪ್ರಧಾನಿ ಮೋದಿ ಹೆಸರಲ್ಲಿ ಮಾಡಲಾಗುತ್ತಿದೆ. ಸೋಮವಾರದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಚಿವ ಕೆ.ಎಸ್.ಈಶ್ವರಪ್ಪ, ಸಿಸಿ ಪಾಟೀಲ್, ಶಶಿಕಲಾ ಜೊಲ್ಲೆ ಧರ್ಮಸ್ಥಳಕ್ಕೆ ಆಗಮಿಸಿದ್ದಾರೆ. ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಎಸ್. ಅಂಗಾರ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಕೂಡ ಪಾಲ್ಗೊಳ್ಳುವುದು ಖಾತ್ರಿಯಾಗಿತ್ತು. ಅವರಿಗೆ ಕೊರೊನಾ ಆಗಿರುವುದರಿಂದ ಪಾಲ್ಗೊಳ್ಳುತ್ತಿಲ್ಲ ಎಂದು ಬೆಳ್ತಂಗಡಿ ಬಿಜೆಪಿ ಪ್ರಮುಖರು ಮಾಹಿತಿ ನೀಡಿದ್ದಾರೆ.

- Advertisement -
spot_img

Latest News

error: Content is protected !!