Saturday, May 18, 2024
Homeಅಪರಾಧವರದಕ್ಷಿಣೆ ಕಿರುಕುಳ ಆರೋಪ - ಮೂವರ ವಿರುದ್ಧ ಪ್ರಕರಣ ದಾಖಲು

ವರದಕ್ಷಿಣೆ ಕಿರುಕುಳ ಆರೋಪ – ಮೂವರ ವಿರುದ್ಧ ಪ್ರಕರಣ ದಾಖಲು

spot_img
- Advertisement -
- Advertisement -

ಮಂಗಳೂರು: ಸುರತ್ಕಲ್ ಕೃಷ್ಣಾಪುರ ಕಾಟಿಪಳ್ಳ 9ನೇ ಬ್ಲಾಕ್ ನ ಅಶ್ರೀನಾ ಎಂಬಾಕೆಗೆ ಅಬ್ದುಲ್ ಖಾದರ್ ಇಸ್ಮಾಯಿಲ್ (ಮಾಲೀಕ ಅಶೀಲ್ ಟ್ರಾವೆಲ್ಸ್ ) ಮಾವ T. A ಮುಹಮ್ಮದ್ (ಮಾಲೀಕ ಅಜ್ಮಿರ್ ರೆಡಿಮೇಡ್ ಶಾಪ್ ಚೊಕ್ಕಬೆಟ್ಟು )ಮತ್ತು ಅತ್ತೆ ಖತೀಜಾ ವರದಕ್ಷಿಣೆ ನೀಡುವಂತೆ ಕಿರುಕುಳ ನೀಡಿದ್ದಾರೆ.

ನನಗೆ 7ವರ್ಷ ಹಿಂದೆ ಮದುವೆಯಾಗಿದ್ದು ಮೂವರು ಹೆಣ್ಣುಮಕ್ಕಳು ಇದ್ದಾರೆ. ಮದುವೆಯ ಸಂದರ್ಭ 50 ಪವನ್ ಚಿನ್ನಭಾರಣವನ್ನು ವರದಕ್ಷಿಣೆ ರೂಪದಲ್ಲಿ ನೀಡಲಾಗಿತ್ತು. ಬಸ್ಸು ತೆಗೆಯಲೆಂದು ಅದನ್ನು ಪತಿ ಬ್ಯಾಂಕಿನಲ್ಲಿ ಅಡವಿಟ್ಟು ಸಾಲ ಪಡೆದಿದ್ದರು. ನಂತರ ಬ್ಯಾಂಕಿನ ಸಾಲದ ಬಡ್ಡಿ ಕಟ್ಟಲು ಹಣ ಇಲ್ಲವೆಂದು ನನ್ನಲ್ಲಿ ಹಣ ತಂದು ಕೊಡು ಎಂದು ಒತ್ತಾಯಿಸುತ್ತಿದ್ದರು. ನಾನು ಹಲವು ಬಾರಿ ನನ್ನ ಅಣ್ಣನಿಂದ ತೆಗೆದು ಕೊಡುತ್ತಿದ್ದೆ. ಕಳೆದ ಬಾರಿಯು ಬಡ್ಡಿ ಕಟ್ಟಲು ಹಣ ಇಲ್ಲಾ ಎಂದಾಗ ನಾನು ಮಾವ ಜಮಾಲ್ ಎಂಬವರಿಂದ ಸಾಲ ಪಡೆದು 2.60ಲಕ್ಷ ರೂ. ಮೂಲಕ ಬಡ್ಡಿಹಣವನ್ನು ಸಂದಾಯ ಮಾಡಿರುವೆ.

ಮದುವೆ ಆದ 4 ವರ್ಷ ದಿಂದಲೇ ನನಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದಾರೆ. 7, 8 ಬಾರಿ ನನ್ನ ಮನೆಯವರ ಕಡೆಯಿಂದ ಹಿರಿಯರ ಸಮ್ಮುಖದಲ್ಲಿ ರಾಜಿ ಪಂಚಾಯಿತಿಗೆ ಕೂಡ ಆಗಿದೆ. ಇಷ್ಟೆಲ್ಲಾ ಆದ್ರೂ ಕೂಡ ಪತಿ ತನ್ನ ನೀಚ ಬುದ್ದಿಯನ್ನು ಬಿಟ್ಟಿರಲಿಲ್ಲ. ಇದು ಮಾತ್ರವಲ್ಲದೆ ಪತಿಯು ತನ್ನ ಬಸ್ಸಿನಲ್ಲಿ ಬರುವ ಹೆಣ್ಣುಮಕ್ಕಳ ಜೊತೆ ಹಾಗೂ ಬೇರೆ ಹೆಣ್ಣುಮಕ್ಕಳ ಜೊತೆ ಫೋನ್ ಮೂಲಕ ಮಾತನಾಡುವುದು ಮತ್ತು ವಾಟ್ಸಪ್ಪ್ ಮೂಲಕ ಮೆಸೇಜ್ ಮಾಡುತಿರಿವುದು ಕೂಡ ಇತ್ತು. ಅಲ್ಲದೆ ಬೇರೆ ಹೆಣ್ಣುಮಕ್ಕಳ ಜೊತೆ ಅನೈತಿಕ ಸಂಭಂದ ಇಟ್ಟು ಕೊಂಡಿದ್ದು ತನ್ನ ಬಸ್ಸಿನಲ್ಲಿ ಸಂಪಾಡಿಸಿದ್ದಾನ್ನೆಲ್ಲ ಅವರಿಗೆ ಖರ್ಚುಮಾಡುತಿದ್ದರು ಪತ್ನಿಯಾಗಿ ಅದನ್ನ ಅರಿತ ನಾನು ಪ್ರಶ್ನೆ ಮಾಡಿದರೆ ನನಗೆ ಮಕ್ಕಳ ಮುಂದೇನೆ ಚಿತ್ರಹಿಂಸೆ ನೀಡುತಿದ್ದರು. ಇದಕ್ಕೂ ಮೊದಲು ನನಗೆ ದೈಹಿಕವಾಗಿ ಹಲ್ಲೆ ನಡೆಸಿ. ಮನೆಯವರಿಗೆ ಫೋನ್ ಮಾಡಿ ಹಣ ಕೇಳು. ಎಂದು ಒತ್ತಾಯಿಸುತ್ತಿದ್ದರು. ನಾನು ಫೋನ್ ಮಾಡಿಲ್ಲ ಎಂಬ ಕಾರಣಕ್ಕೆ ಸಿಟ್ಟಿನಿಂದ ನನಗೆ ಹಲ್ಲೆ ಮಾಡಿ ನನ್ನಲ್ಲಿದ್ದ ಮೊಬೈಲ್ ಫೋನನ್ನು ತೆಗೆದುಕೊಂಡು ಒಡೆದು ಹಾಕಿದ್ದಾರೆ.

ಮಾನಸಿಕ ಹಿಂಸೆ ನೀಡಿದ ಸಂದರ್ಭದಲ್ಲಿ ನಾವು ಮಹಿಳಾ ಸಮಾಜಕ್ಕೂ ಕಂಪ್ಲೇಂಟ್ ಮಾಡಿದ್ದೆವು ಮತ್ತು ಪಾಂಡೇಶ್ವರ ಮಹಿಳಾ ಸ್ಟೇಷನ್ ನಲ್ಲಿ ಕಂಪ್ಲೇಂಟ್ ಕೊಟ್ಟಿದ್ದೆವು ಅಲ್ಲೂ ಕೂಡ ನನಗೆ ನ್ಯಾಯ ಸಿಗಲಿಲ್ಲ. ಇಷ್ಟೆಲ್ಲಾ ಆಗಿಯೂ ಮೊನ್ನೆ ಜ.4. ರಂದು ಸಂಜೆ 5ಕ್ಕೆ ಮಾವ ಮತ್ತು ಅತ್ತೆಯ ಸಮ್ಮುಖದಲ್ಲಿ ಮಾನಸಿಕ ಹಿಂಸೆ ನೀಡಿ ಮತ್ತಷ್ಟು ಹಣ ತಂದು ಕೊಡುವಂತೆ ಒತ್ತಾಯಿಸಿ ಮನಬಂದಂತೆ ಹಲ್ಲೆ ನಡೆಸಿ ನನ್ನ ಬಟ್ಟೆಗಳನ್ನೆಲ್ಲ ಹರಿದು ಹಾಕಿ ಜೀವ ಬೆದರಿಕೆ ಹಾಕಿದ್ದಾರೆ. ಅಲ್ಲದೆ ಜ.7ರಂದು. ಪತಿ, ಮಾವ, ಅತ್ತೆ ಈ ಮೂವರ ಮೇಲೆ FIR ಕೂಡ ಆಗಿದ್ದು. ಮೂವರು ಕೂಡ ತಲೆಮರೆಸಿ ಕೊಂಡಿದ್ದಾರೆ. ಅವರನ್ನು ಪೊಲೀಸರು ಹುಡುಕುತ್ತಿದ್ದಾರೆ ಎಂದು ನೊಂದ ಯುವತಿ ಅಶ್ರೀನಾ ದೂರಿನಲ್ಲಿ ಆರೋಪಿಸಿದ್ದಾರೆ.

- Advertisement -
spot_img

Latest News

error: Content is protected !!