Tuesday, April 23, 2024
Homeತಾಜಾ ಸುದ್ದಿ"ಸಂಗೀತ ಲೋಕದ ದಿಗ್ಗಜನಿಗೆ ಕೊನೆಯ ವಿದಾಯ" ಹೇಗೆ ನಡೆಯುತ್ತೆ ಗೊತ್ತಾ ಸ್ವರ ಸಾಮ್ರಾಟನ ಅಂತ್ಯಸಂಸ್ಕಾರ?

“ಸಂಗೀತ ಲೋಕದ ದಿಗ್ಗಜನಿಗೆ ಕೊನೆಯ ವಿದಾಯ” ಹೇಗೆ ನಡೆಯುತ್ತೆ ಗೊತ್ತಾ ಸ್ವರ ಸಾಮ್ರಾಟನ ಅಂತ್ಯಸಂಸ್ಕಾರ?

spot_img
- Advertisement -
- Advertisement -

ತಮಿಳುನಾಡು: ಹಲವು ನೆನಪುಗಳ ಗಾನ ಸುಧೆಯನ್ನು ಮನದಾಳದಲ್ಲಿ ಬಿತ್ತಿ ಬಾರದ ಲೋಕಕ್ಕೆ ಪ್ರಯಾಣಿಸಿರುವ ಗಾನ ಗಾರುಡಿಗ, ಪದ್ಮ ವಿಭೂಷಣ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಅಂತ್ಯಕ್ರಿಯೆ ಇಂದು ನಡೆಯಲಿದೆ. ಸಾರ್ವಜನಿಕರಿಗೆ ಪಾರ್ಥಿವ ಶರೀರದ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ತಿರುವಳ್ಳೂರು ಜಿಲ್ಲೆಯ ತಮಾರೈಪಕ್ಕಂ ಗ್ರಾಮದಲ್ಲಿರುವ ಅವರ ಫಾರ್ಮ್ ಹೌಸ್ ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಕೊರೋನಾವೈರಸ್ ವಿರುದ್ಧ ಎರಡು ತಿಂಗಳು ಹೋರಾಟ ನಡೆಸಿದ 74 ವರ್ಷದ ಹಿರಿಯ ಗಾಯಕ, ಚಿಕಿತ್ಸೆ ಫಲಕಾರಿಯಾಗಿದೆ ಮೃತಪಟ್ಟಿದ್ದು, ದೇಶದ ಸಂಗೀತ ಲೋಕದ ಕೊಂಡಿಯೊಂದು ಕಳಚಿದಂತಾಗಿದೆ. ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಅಂತ್ಯಸಂಸ್ಕಾರ ವೇಳೆಯಲ್ಲಿ ಪೊಲೀಸ್ ಇಲಾಖೆಯಿಂದ ಗೌರವ ಸಮರ್ಪಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನಿನ್ನೆ ಮಧ್ಯಾಹ್ನ ಎಂಜಿಎಂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಪಾರ್ಥಿವ ಶರೀರವನ್ನು ಚೆನ್ನೈನಲ್ಲಿನ ನಣಗಂಬುಕಂ ನಿವಾಸಕ್ಕೆ ತರಲಾಯಿತು. ತಡರಾತ್ರಿ ಪಾರ್ಥಿವ ಶರೀರವನ್ನು ಫಾರ್ಮ್ ಹೌಸ್ ಗೆ ತರಲಾಯಿತು.ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿದಂತೆ 16 ಭಾಷೆಗಳಲ್ಲಿ ಸುಮಾರು 50 ಸಾವಿರ ಗೀತೆಗಳಿಗೆ ಧ್ವನಿಯಾಗಿರುವ ಎಸ್ಪಿಬಿ ನಿಧನಕ್ಕೆ ಇಡೀ ದೇಶವೇ ಮರುಗಿದೆ.

- Advertisement -
spot_img

Latest News

error: Content is protected !!