- Advertisement -
- Advertisement -
ಮಂಗಳೂರು : ನಟ ವಿಜಯ ರಾಘವೇಂದ್ರ ಪತ್ನಿ ,ಬೆಳ್ತಂಗಡಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ರಕ್ಷಿತ್ ಶಿವರಾಂ ಅವರ ಸಹೋದರಿ ಸ್ಪಂದನ ರಾಘವೇಂದ್ರ ಥೈಲ್ಯಾಂಡ್ ದೇಶದಲ್ಲಿ ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನಹೊಂದಿದ್ದಾರೆ.
ಸ್ಪಂದನಾ ಅವರು ಬೆಂಗಳೂರಿನಲ್ಲಿ ಜನಿಸಿದರು. ಮಾಜಿ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ ಅವರ ಪುತ್ರಿ ಸ್ಪಂದನಾ ಅವರು ನಟ ವಿಜಯ್ ರಾಘವೇಂದ್ರ ಅವರನ್ನು 2007ರಲ್ಲಿ ವಿವಾಹವಾದರು. ಸ್ಪಂದನಾ ಅವರು 2016 ರಲ್ಲಿ ವಿ. ರವಿಚಂದ್ರನ್ ಜೊತೆಗೆ “ಅಪೂರ್ವ” ಚಿತ್ರದಲ್ಲಿ ನಟಿಸಿದ್ದಾರೆ.

ಇನ್ನೂ ವಿಷಯ ತಿಳಿಯುತ್ತಿದ್ದಂತೆ ವಿಜಯರಾಘವೇಂದ್ರ ಕುಟುಂಬದವರು ಬ್ಯಾಂಕಾಕ್ ಗೆ ತೆರಳಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
- Advertisement -