Thursday, June 4, 2026
Homeಕರಾವಳಿಮಂಗಳೂರುಮಂಗಳೂರು; ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಕಾರಿಗೆ ಕಡಿಮೆ ಬೆಲೆ ನಮೂದಿಸಿ ಸರ್ಕಾರಕ್ಕೆ ತೆರಿಗೆ ವಂಚನೆ;...

ಮಂಗಳೂರು; ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಕಾರಿಗೆ ಕಡಿಮೆ ಬೆಲೆ ನಮೂದಿಸಿ ಸರ್ಕಾರಕ್ಕೆ ತೆರಿಗೆ ವಂಚನೆ; ಮೂವರು ಆರ್ ಟಿಓ ಅಧಿಕಾರಿಗಳು ಸಸ್ಪೆಂಡ್

- Advertisement -
- Advertisement -

ಮಂಗಳೂರು; ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಕಾರಿಗೆ ನಕಲಿ ದಾಖಲೆ ಪತ್ರಗಳನ್ನು ಬದಲಾಯಿಸಿ ಕಡಿಮೆ ಬೆಲೆ ನಮೂದಿಸಿ ಸರ್ಕಾರಕ್ಕೆ ತೆರಿಗೆ ವಂಚನೆ ಮಾಡಿದ ಆರೋಪದಡಿ ಮೂವರು ಆರ್ ಟಿಓ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ.


ಮಂಗಳೂರಿನ ಉಪ ಸಾರಿಗೆ ಆಯುಕ್ತರ ಕಚೇರಿಯ ಮೂವರನ್ನು ಅಮಾನತುಗೊಳಿಸಲಾಗಿದೆ.  ಮಂಗಳೂರು ಉಪ ಸಾರಿಗೆ ಆಯುಕ್ತರ ಕಚೇರಿಯ ಕೇಂದ್ರ ಸ್ಥಾನೀಯ ಸಹಾಯಕಿ ಸರಸ್ವತಿ, ಅಧೀಕ್ಷಕಿ ರೇಖಾ ನಾಯಕ್, ಪ್ರಥಮ ದರ್ಜೆ ಸಹಾಯಕ ನೀಲಪ್ಪ ಕೆ.ಎಚ್ ಸಸ್ಪೆಂಡ್ ಆದವರು.


ಮರ್ಸಿಡಿಸ್ ಬೆನ್ ಕಾರಿಗೆ ಸಂಬಂಧಿಸಿದಂತೆ 01.01.2017ರಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಅವರ ಎಲೆಕ್ಟ್ರಾನಿಕ್ ಸಿಟಿ ಕಚೇರಿಯಿಂದ ಮಂಗಳೂರು ಕಚೇರಿಗೆ ತಾತ್ಕಾಲಿಕ ನೋಂದಣಿ ಪತ್ರವನ್ನು ನಿಹಾಲ್‌ ಅಹಮದ್ ಹೆಸರಿನಲ್ಲಿ₹1,96,95,000ಕ್ಕೆ ಇನ್‌ವಾಯಿಸ್ ನೀಡಲಾಗಿದೆ. ಈ ತಾತ್ಕಾಲಿಕ ನೋಂದಣಿಯ ವಿವರಗಳನ್ನು 24.12.2024ರಂದು ಮಂಗಳೂರು ಕಚೇರಿಯಲ್ಲಿ ಮಾರ್ಪಾಡುಗೊಳಿಸಿ, ಈ ಕಾರಿನ ಮಾರಾಟ ಮೊತ್ತ ₹32,15,000 ಎಂದು ನಮೂದಿಸಲಾಗಿದೆ. ಈ ಅಕ್ರಮವೆಸಗಿದ ಕಾರಣಕ್ಕಾಗಿ ಈ ಮೂವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲಾಗಿದೆ ಎಂದು ಸಾರಿಗೆ ಆಯುಕ್ತ ಯೋಗೀಶ್ ಎ.ಎಂ. ಅವರು ಹೊರಡಿಸಿರುವ ಅಮಾನತು ಆದೇಶದಲ್ಲಿ ತಿಳಿಸಿದ್ದಾರೆ.

- Advertisement -

Latest News

error: Content is protected !!